ಕಂದ್ರಪ್ಪಾಡಿ : ರಸ್ತೆ ಬದಿ ಕುಸಿತ

0


ಕಂದ್ರಪ್ಪಾಡಿ ಮುಖ್ಯರಸ್ತೆಯ ಗೌರಿಗುಂಡಿ ಎಂಬಲ್ಲಿ ಹಾದು ಹೋಗುವ ರಸ್ತೆಯು ಇಕ್ಕಟ್ಟಾಗಿದ್ದು, ತಿರುವು ಹಾಗೂ ಉಬ್ಬು ತಗ್ಗುಗಳಿಂದ ಕೂಡಿದೆ. ಅಲ್ಲದೆ ಪಕ್ಕದಲ್ಲಿರುವ ತಿರುವಿನ ಒಂದು ಬದಿಯಲ್ಲಿ ರಸ್ತೆ ಕುಸಿದಿದ್ದು. ಇತ್ತೀಚಿನ ದಿನಗಳಲ್ಲಿ ಈ ರಸ್ತೆಯಲ್ಲಿ ವಾಹನ ದಟ್ಟಣೆಗಳು ಹೆಚ್ಚಾಗಿರುವುದರಿಂದ ಎದುರು ಬದುರು ಬರುವ ವಾಹನಗಳು ಬದಿಗೆ ಸರಿಯುವುದರಿಂದ ಅಕಸ್ಮಾತ್ತಾಗಿ ಆಯ ತಪ್ಪಿದ್ದರೆ ವಾಹನವಂತು ಹೊಳೆಗೆ ಬೀಳುವುದು ಖಚಿತ, ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸುವಂತೆ ಆ ಭಾಗದ ವಾಹನ ಸಂಚಾರರು ಒತ್ತಾಯಿಸುತ್ತಿದ್ದಾರೆ.