ತೆಕ್ಕೆಕೆರೆ ಶಂಕರನಾರಾಯಣ ಭಟ್ರಿಗೆ ಶಿಕ್ಷಕರತ್ನ ಪ್ರಶಸ್ತಿ ಲಭಿಸಿದೆ.
ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಸುದೀರ್ಘವಾಗಿ ಆಂಗ್ಲಭಾಷಾ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸಂಸ್ಥೆಯಲ್ಲಿ ನೂತನ ಪ್ರಯೋಗಾಲಯ, ಆಡಳಿತ ಕಛೇರಿ,ಆಟದ ಬಯಲಿಗೆ ಗ್ಯಾಲರಿ, ತಡೆಗೋಡೆ, ಸಿಲ್ವರ್ ಜ್ಯುಬಿಲಿ ಹಾಲ್ನಲ್ಲಿ ರಂಮಂಟಪ ಇತ್ಯಾದಿಯಾಗಿ ಅನೇಕ ಕೆಲಸಗಳನ್ನು ಕೈಗೆತ್ತಿಕೊಂಡು ಸಂಸ್ಥೆಯ ಏಳಿಗೆಗೆ ದುಡಿದಿದ್ದಾರೆ.
ನಿವೃತ್ತಿ ನಂತರ ಕಡಬದ ಸೈಂಟ್ ಜೋಕಿಮ್ಸ್ ಏ.ಪೂ.ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಬಳಿಕ ಮಂಗಳೂರಿನ ನಿಟ್ಟೆ ಏ.ಪೂ.ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸುಧೀರ್ಘ ೪೮ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ತೆಕ್ಕೆಕೆರೆ ಶಂಕರನಾರಾಯಣ ಭಟ್ ಇವರಿಗೆ ದಶಂಬರ ೨೭, ೨೮ ಮತ್ತು ೨೯ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ವಿಶ್ವಹವ್ಯಕ ಸಮ್ಮೀಳನದಲ್ಲಿ ಶಿಕ್ಷಕರತ್ನ ಪ್ರಶಸ್ತಿ ನೀಡಿ ಗೌರವಿಸಲಿದೆ ಎಂಬುದಾಗಿ ಸಂಘಟಕರು ತಿಳಿಸಿದ್ದಾರೆ.