ಸುಳ್ಯ ವೃತ್ತ ನಿರೀಕ್ಷರ ಕಚೇರಿಯಲ್ಲಿ ಠಾಣೆಗಳ ಕಾರ್ಯವೈಖರಿಗಳ ದಾಖಲೆಗಳ ಪರಿಶೀಲನೆ
ದಕ್ಷಿಣ ವಲಯದ ಡಿ ಐ ಜಿ ಅಮಿತ್ ಸಿಂಗ್ ರವರು ನ ೧೫ ರಂದು ಸುಳ್ಯಕ್ಕೆ ಭೇಟಿ ನೀಡಿ ಸುಳ್ಯ ವೃತ್ತ ನಿರೀಕ್ಷಕರ ಕಚೇರಿ ಹಾಗೂ ಇದರ ವ್ಯಾಪ್ತಿಯ ಪೊಲೀಸ್ ಠಾಣೆಗಳ ಕೆಲಸ ಕಾರ್ಯಗಳ ದಾಖಲೆಗಳನ್ನು ತರಿಸಿ ಪರಿಶೀಲನೆ ನಡೆಸಿದರು.
ಠಾಣೆಗಳಲ್ಲಿ ಉಳಿದಿರುವ ಪ್ರಕರಣಗಳು, ಪತ್ತೆ ಹಚ್ಚಲು ಬಾಕಿ ಇರುವ ಪ್ರಕರಣಗಳು, ಮುಂತಾದ ವಿಷಯಗಳ ಬಗ್ಗೆ ವೃತ್ತ ನಿರೀಕ್ಷಕರು ಹಾಗೂ ಠಾಣಾ ಉಪನಿ ರೀಕ್ಷಕರುಗಳಿಂದ ಮಾಹಿತಿ ಪಡೆದು ಶೀಘ್ರವಾಗಿ ಉಳಿದ ಎಲ್ಲಾ ಪ್ರಕರಣಗಳ ತನಿಖೆ ಕೈಗೊಂಡು ತಮ್ಮ ತಮ್ಮ ಜವಾಬ್ದಾರಿಗಳನ್ನು ಪೂರ್ಣಗೊಳಿಸುವ ಬಗ್ಗೆ ಸೂಚನೆ ನೀಡಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಪತ್ರ ಕರ್ತರ ಪ್ರಶ್ನೆಗೆ ಉತ್ತರಿಸಿ ಸುಳ್ಯದಲ್ಲಿ ಟ್ರಾಫಿಕ್ ಠಾಣೆಯ ಬಗ್ಗೆ ಯಾವುದೇ ಬೇಡಿಕೆ ಬಂದಿಲ್ಲ, ಬಂದರೆ ಈ ಬಗ್ಗೆ ಆಲೋಚನೆ ಮಾಡಲಾಗುವುದು ಮತ್ತು ಸುಭ್ರಮಣ್ಯ ಪೊಲೀಸ್ ಠಾಣೆಯ ಕಟ್ಟಡ ಕಾಮಗಾರಿ ಬಗ್ಗೆ ಮಾತನಾಡಿ ಠಾಣೆಯ ಕಟ್ಟಡ ಕೆಲಸ ಆಗಿದೆ ಇದರ ಉದ್ಘಾಟನೆಯ ಬಗ್ಗೆ ಮತ್ತು ಬೆಳ್ಳಾರೆಯಲ್ಲಿ ಪೊಲೀಸ್ ಸಿಬ್ಬಂದಿಗಳ ಕೋಟ್ರಸ್ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರು ಕಲ್ಲುಗುಂಡಿ ಔಟ್ ಪೋಸ್ಟ್ ಕಟ್ಟಡದ ಅಭಿವೃದ್ಧಿ ಬಗ್ಗೆ ಡಿ ಐ ಜಿರವರ ಗಮನಕ್ಕೆ ತಂದಾಗ ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ದ ಕ ಜಿಲ್ಲಾ ಎಸ್ ಪಿ ಯತೀಶ್ ಎನ್, ಪುತ್ತೂರು ಡಿ ವೈ ಎಸ್ ಪಿ ಅರುಣ್ ನಾಗೇಗೌಡ, ಸುಳ್ಯ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್, ಸುಳ್ಯ ಎಸ್ ಐ ಸಂತೋಷ್, ಬೆಳ್ಳಾರೆ ಎಸ್ ಐ ಈರಯ್ಯ ದೂಂತೂರು, ಸುಬ್ರಹ್ಮಣ್ಯ ಎಸ್ ಐ ಕಾರ್ತಿಕ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.