ಕೊಲ್ಲಮೊಗ್ರು :ಗ್ರಾಮ ಪಂಚಾಯತ್ ನಲ್ಲಿ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತಿದ್ದು ಒಬ್ಬರು ನಾಮಪತ್ರ ಹಿಂತೆಗೆತ ಮಾಡಿದ ಕಾರಣ ಬಿಜೆಪಿಯ ಬಾಲಸುಬ್ರಹ್ಮಣ್ಯ ಭಟ್ ಅವಿರೋಧ ಆಯ್ಕೆಯಾಗಿದ್ದಾರೆ.
ಬಿಜೆಪಿಯಿಂದ ಬಾಲಸುಬ್ರಹ್ಮಣ್ಯ ಭಟ್, ಕಾಂಗ್ರೆಸ್ ನಿಂದ ಪದ್ಮಯ್ಯ ಕೊಂದಾಳ ನ.12 ರಂದು ನಾಮಪತ್ರ ಸಲ್ಲಿಸಿದ್ದರು. ಇಂದು ಪದ್ಮಯ್ಯ ಕೊಂದಾಳ ನಾಮಪತ್ರ ಹಿಂತೆಗೆತ ಮಾಡಿದ ಕಾರಣ ಬಾಲಸುಬ್ರಹ್ಮಣ್ಯ ಭಟ್ ಅವಿರೋಧ ಆಯ್ಕೆ ನಡೆದಿದೆ.