ಪುಟಾಣಿ ಮಕ್ಕಳೊಂದಿಗೆ ಬೆರೆತ ಸ್ಥಳೀಯ ಸಂಘ ಸಂಸ್ಥೆಗಳು
ಜಯನಗರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ನ. 14 ರಂದು ನಡೆಯಿತು.
ಜಯನಗರ ಅಂಗನವಾಡಿ ಬಾಲ ವಿಕಾಸ ಸಮಿತಿ, ಮೈತ್ರಿ ಮಹಿಳಾ ಮಂಡಲ,ವಿಕ್ರಮ ಯುವಕ ಮಂಡಲ ಇವುಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರದ ಪುಟಾಣಿ ವಿದ್ಯಾರ್ಥಿ ಅಧಿತ್ಯ ರಾಮ್ ವಹಿಸಿದ್ದರು.
ಮಹಿಳಾ ಮತ್ತು ಮಕ್ಕಳ ಇಲಾಖೆಯ ವಲಯ ಮೇಲ್ವಿಚಾರಕಿ ಶ್ರೀಮತಿ ವಿಜಯ, ನ ಪಂ ಸದಸ್ಯರಾದ ಶಿಲ್ಪಾ ಸುದೇವ್, ವಿಕ್ರಮ ಯುವಕ ಮಂಡಲದ ಅಧ್ಯಕ್ಷ ಅಭಯ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಮಿಷ್ರಿಯಾ, ಅಂಗನವಾಡಿ ಶಿಕ್ಷಕಿ ತಿರುಮಲೇಶ್ವರಿ ಉಪಸ್ಥಿತರಿದ್ದರು.
ಪುಟಾಣಿ ಮಕ್ಕಳ ಛದ್ಮ ವೇಷ ಸ್ಪರ್ಧೆ ಮತ್ತು ವಿವಿಧ ಸಾಂಸ್ಕೃ ತಿಕ ಕಾರ್ಯಕ್ರಮಗಳು ನಡೆಯಿತು.