ಶ್ರೀ ಕಾಂಚಿ ಕಾಮಕೋಟಿ ಪೀಠದ ಜಗದ್ಗುರು ಶಂಕಾರಾಚಾರ್ಯ ಪೂಜ್ಯ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮೀಜಿ ಯವರು ಅರಂಬೂರಿನ ಭಾರದ್ವಾಜಾಶ್ರಮಕ್ಕೆ ಇಂದು ಆಗಮಿಸಲಿದ್ದಾರೆ.
ಬೆಳಗ್ಗೆ ಗಂಟೆ 11.00 ರಿಂದಸೂರ್ಯಾಸ್ತಮಾನದ ತನಕ ಕಾರ್ತಿಕ ಸೋಮವಾರದ ಪರ್ವಕಾಲದಲ್ಲಿ ಸಪರಿವಾರ ಶ್ರೀ ಚಂದ್ರಮೌಳೀಶ್ವರ ಪೂಜೆಯು ನಡೆಯಲಿರುವುದು. ಸಂಜೆ ಗಂಟೆ 7.00 ರಿಂದ ಮಹಾಸ್ವಾಮಿಗಳು ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಶ್ರೀ ಗಳಿಂದ ಆಶೀರ್ವಚನ ಕಾರ್ಯಕ್ರಮವು ನಡೆಯಲಿರುವುದು.