ಮೊಗರ್ಪಣೆ :ಸುನ್ನೀ ಬಾಲ ಸಂಘ ಮೊಗರ್ಪಣೆ ವತಿಯಿಂದ ತಾಜುಲ್ ಉಲಮಾ, ನೂರುಲ್ ಉಲಮಾ, ಖುರ್ರತುಸ್ಸಾದಾತ್ ಅನುಸ್ಮರಣಾ ಕಾರ್ಯಕ್ರಮ

0

ಮೊಗರ್ಪಣೆ ಮುಹ್ಯುದ್ದೀನ್ ಜುಮಾ ಮಸೀದಿ ಇದರ ಆಶ್ರಯದಲ್ಲಿ ಸುನ್ನೀ ಬಾಲ ಸಂಘ ಎಸ್ ಬಿ ಎಸ್ ವತಿಯಿಂದ ನ. 16 ಹಾಗೂ 17 ರಂದು ತಾಜುಲ್ ಉಲಮಾ ಹಾಗೂ ನೂರುಲ್ ಉಲಮಾ, ಕೂರತ್ ತಂಙಳ್ ಸೇರಿದಂತೆ ಅಗಲಿದ ಮಹಾನರ ಅನುಷ್ಮರಣೆ ಬುರ್ದಾ ಮಜ್ಲೀಸ್ ಹಾಗೂ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮ ಮೊಗರ್ಪಣೆ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಿತು.

ನ 16 ರಂದು ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆದು ಬುರ್ದಾ ಹಾಗೂ ಇಶಲ್ ನೈಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಖ್ಯಾತ ಪಂಡಿತ ಹಾಗೂ ಹಾಡುಗಾರ ಅಶ್ರಫ್ ಮುಸ್ಲಿಯಾರ್ ಪೆರುಮುಗಂ ಹಾಗೂ ಸಂಗಡಿಗರು ಬುರ್ದಾ ಮಜ್ಲಿಸ್ ನಡೆಸಿದರು.

ದುಆ ನೇತ್ರತ್ವ ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಜಯನಗರ ನಿರ್ವಹಿಸಿ ಸ್ಥಳೀಯ ಮುದರ್ರಿಸ್ ಹಾಫಿಲ್ ಶೌಕತ್ ಅಲೀ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಎಚ್ ಜೆ ಕಮಿಟಿ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ ಸೀ ಫುಡ್ ವಹಿಸಿದ್ದರು.

ನ 17 ರಂದು ಸಮಾರೋಪ ಸಮಾರಂಭ ನಡೆದು ಅನುಸ್ಮರಣಾ ಪ್ರಭಾಷಣವನ್ನು ಮಾಡಿದ ಬಹು ಹಾಫಿಲ್ ಮುಹಮ್ಮದ್ ಅಬೂಬಕ್ಕರ್ ಕೌಸರ್ ಸಖಾಫಿರವರು ಅಗಲಿದ ನೇತಾರರ ಜೀವನ ಚರ್ಯೆಯ ಬಗ್ಗೆ ತಿಳಿಸಿದರು.

ಮುಖ್ಯ ಅಂಗವಾದ ದುಆ ನೇತ್ರತ್ವವನ್ನು ಸಯ್ಯಿದ್ ಮಶ್ಹೂದ್ ತಙಳ್ ಕೂರತ್ ರವರು ನೀಡಿ ಹಿತ ನುಡಿಗಳನ್ನಾಡಿದರು.

ಅಧ್ಯಕ್ಷತೆಯನ್ನು ಸ್ವಾಗತ ಸಮಿತಿ ಚಯರ್ಮೆನ್ ಹಾಜಿ ಪಳ್ಳಿ ಕುಂಞಿ ಶಾಂತಿನಗರ ವಹಿಸಿದ್ದರು.

ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಜಮಾಅತ್ ಕಮಿಟಿ ಪ್ರ. ಕಾರ್ಯಧರ್ಶಿ ಇಬ್ರಾಹಿಂ ಎಸ್ ಯು, ಉಪಾಧ್ಯಕ್ಷ ಉಸ್ಮಾನ್ ಸಿ ಎಂ,ಕಟ್ಟಡ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಸಮದ್, ಕಾರ್ಯದರ್ಶಿ ಎಸ್ ವೈ ಅಬ್ದುಲ್ ರಹಿಮಾನ್, ಹಾಗೂ ಸಮಿತಿ ಸದಸ್ಯರುಗಳು,ಮದರಸ ಅಧ್ಯಾಪಕ ವೃಂದದವರು,ಹಾಗೂ ಧಾರ್ಮಿಕ ಗುರುಗಳು, ಉಪಸ್ಥಿತರಿದ್ದರು.

ಮೊಗರ್ಪಣೆ ನೂರುಲ್ ಇಸ್ಲಾಂ ಮದರಸ ಇದರ ಸದರ್ ಮುಅಲ್ಲಿಮ್ ಹಾಗೂ ಕನ್ವಿನರ್ ಅಬ್ದುಲ್ ಕರೀಂ ಸಖಾಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದ ಸ್ವಾಗತ ಸಮಿತಿ ಸದಸ್ಯರು,ಸ್ಥಳೀಯ ಸಹ ಸಂಘಟನೆಗಳ ಸದಸ್ಯರುಗಳು, ಯುವಕರು,ಎಸ್ ಬಿ ಎಸ್ ಸಮಿತಿ ಸದಸ್ಯರುಗಳು ಸಹಕರಿಸಿದರು.ಕೊನೆಯಲ್ಲಿ ಅನ್ನಧಾನ ನಡೆಯಿತು.