ಅಡ್ಪಂಗಾಯ ಶ್ರೀ ಅಯ್ಯಪ್ಪ ಮಂದಿರದಲ್ಲಿ ಸಂಕ್ರಮಣ ಪ್ರಯುಕ್ತ ಪೂಜಾ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ನ. 17ರಂದು ಕ್ಷೇತ್ರದ ಧರ್ಮದರ್ಶಿ ಮತ್ತು ಗುರುಸ್ವಾಮಿಗಳಾದ ಶಿವಪ್ರಕಾಶ್ ಅಡ್ಪಂಗಾಯರ ನೇತೃತ್ವದಲ್ಲಿ ನಡೆಯಿತು. ಬೆಳಿಗ್ಗೆ ಪುರೋಹಿತರಾದ ಗಿರೀಶ್ ಭಟ್ ನೇತೃತ್ವದಲ್ಲಿ ಗಣಪತಿ ಹವನ ಹಾಗೂ ವೈದಿಕ ಕಾರ್ಯಗಳು ನಡೆಯಿತು. ಸಂಜೆ ದುರ್ಗಾ ಪೂಜೆ ಹಾಗೂ ಅಕ್ಷಯ ಭಟ್ ಮತ್ತು ಬಳಗ ಸುಳ್ಯ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
















ಬಳಿಕ ಶಿವಪ್ರಕಾಶ್ ಗುರುಸ್ವಾಮಿಯವರ ಅಯ್ಯಪ್ಪ ಸ್ವಾಮಿಯ ದರ್ಶನ ಸೇವೆ ಸೇವೆಯೊಂದಿಗೆ ಮಂಗಳಾರತಿ ನಡೆಯಿತು. ಈ ಸಂದರ್ಭದಲ್ಲಿ ನಿವೃತ್ತ ಯೋಧ ಮಡಿಕೇರಿಯ ಕಡಿಯತ್ತೂರು ಕುಂಜಲನ ಸೀತಾರಾಮ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಶ್ರೀಮತಿ ವಿಶಾಲ ಕೆ ಇವರನ್ನು ಸನ್ಮಾನಿಸಲಾಯಿತು. ಪೂಜಾ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು. ನ. 18ರಂದು 11 ಮಂದಿ ಶಿಷ್ಯರೊಂದಿಗೆ ಶಬರಿಮಲೆ ಯಾತ್ರೆ ನಡೆಸಿದರು.










