ನ.21ನೇ ಗುರುವಾರದಂದು ಸುಬ್ರಹ್ಮಣ್ಯ ಜಾತ್ರಾ ಪ್ರಯುಕ್ತ ಪೂರ್ವ ಸಿದ್ಧತೆಗಾಗಿ 33/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಪೂರ್ವಾಹ್ನ 10.00 ಗಂಟೆಯಿಂದ ಅಪರಾಹ್ನ 5.00 ಗಂಟೆಯ ವರೆಗೆ ಸುಬ್ರಹ್ಮಣ್ಯ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ನಿಲುಗಡೆ ಮಾಡಲಾಗುವುದು.
ಆದ್ದರಿಂದ ಸುಬ್ರಹ್ಮಣ್ಯ ಶಾಖಾ ವ್ಯಾಪ್ತಿಯ ಆದಿಶೇಷ, ಕುಮಾರಧಾರ, ಹರಿಹರ, ನಡುಗಲ್ಲು , ಏನೇಕಲ್ಲು, ಕೈಕಂಬ 11ಕೆವಿ ಫೀಡರ್ ಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕಾಗಿ ಕೋರಲಾಗಿದೆ. ಎಂದು ಸುಬ್ರಹ್ಮಣ್ಯ ಮೆಸ್ಕಾಂ
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.