ಗ್ರಾಮಗಳ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರ ಪ್ರಮುಖವಾಗಿದೆ – ಎಸ್.ಆರ್ ಸತೀಶ್ಚಂದ್ರ
ಸಾಮಾಜಿಕ ಹಿತದೃಷ್ಟಿಯಿಂದ ಹುಟ್ಟಿಕೊಂಡ ಸಹಕಾರಿ ಸಂಸ್ಥೆ ಬೆಳೆಯುತ್ತಾ ಬೆಳೆಯುತ್ತಾ ಇಂದು ಬೃಹದಾಕಾರದಲ್ಲಿ ಬೆಳೆದಿದೆ. ಇದರಲ್ಲಿ ಮೊಳಹಳ್ಳಿ ಶಿವರಾಯರ ಕೊಡುಗೆ ಮಹತ್ತರವಾದದ್ದು. ಭಾರತ ಇಂದು ಸ್ವಾವಲಂಬಿಯಾಗಿದೆ ಎಂದರೆ ಅದು ಸಹಕಾರ ಸಂಘದ ಕೊಡುಗೆ. ಗ್ರೀನ್ ರೆವಲ್ಯೂಷನ್ ಮೂಲಕ ಆಹಾರ ಉತ್ಪಾದನೆಯಲ್ಲಿ ಭಾರತ ಇಂದು ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ. ಸಹಕಾರಿ ಸಂಸ್ಥೆ ಇಂದು ಪ್ರತಿಯೊಬ್ಬ ರೈತರಿಗೂ ತೆರೆದುಕೊಂಡಿದೆ.
ಆ ಮೂಲಕ ಗ್ರಾಮಗಳ ಅಭಿವೃದ್ಧಿಯಾಯಿತು. ಸಹಕಾರಿ ಕ್ಷೇತ್ರಕ್ಕೆ ಉನ್ನತ ವಿದ್ಯಾಭ್ಯಾಸವನ್ನು ಪಡೆದಿರುವ ಯುವಕರನ್ನು ಕರೆತರುವ. ವಿಶ್ವ ಉಳಿಯಬೇಕಾದರೆ ಭಾರತ ಸದೃಢವಾಗಬೇಕು. ಅದು ಸಹಕಾರ ಕ್ಷೇತ್ರದಿಂದ ಸಾಧ್ಯ ಎಂದು ಸರಸ್ವತಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಹೇಳಿದರು. ಅವರು ನ. 20ರಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಬೆಂಗಳೂರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ಸಹಕಾರ ಇಲಾಖೆ, ಸುಳ್ಯ ತಾಲೂಕು ಸಹಕಾರಿ ಯೂನಿಯನ್, ತಾಲೂಕಿನ ಎಲ್ಲಾ ಪ್ರಾ.ಕೃ.ಪ.ಸ. ಸಂಘಗಳು ಹಾಗೂ ಇತರ ಸಹಕಾರಿ ಸಂಘಗಳ ಸಹಕಾರದೊಂದಿಗೆ ಕಳಂಜ ಬಾಳಿಲ ಪ್ರಾ.ಕೃ.ಪ.ಸ. ಸಂಘದ ಆಶಯದಲ್ಲಿ ಸಂಘದ ಪ್ರಧಾನ ಕಚೇರಿ ಕೋಟೆಮುಂಡುಗಾರಿನಲ್ಲಿ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ 2024 ರಲ್ಲಿ ಉತ್ತಮ ವಿಶ್ವ ನಿರ್ಮಾಣ ಹಾದಿಗಾಗಿ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ವಿಚಾರವಾಗಿ ಎಂಬ ವಿಚಾರವಾಗಿ ದಿಕ್ಸೂಚಿ ಭಾಷಣ ಮಾಡಿದರು. ಬೆಳಿಗ್ಗೆ ಸಹಕಾರಿ ನಡಿಗೆಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯ ಚಂದ್ರ ಕಿಲಂಗೋಡಿ ಉದ್ಘಾಟಿಸಿ ಸಹಕಾರಿ ಸಪ್ತಾಹ ಸಹಕಾರಿ ಕ್ಷೇತ್ರದಲ್ಲಿ ಹೊಸತನವನ್ನು ಮತ್ತು ಬದಲಾವಣೆಯನ್ನು ತಂದಿದೆ ಎಂದರು.
ದ.ಕ. ಜಿಲಾ ಸಹಕಾರಿ ಯೂನಿಯನ್ ಮಂಗಳೂರು ಇದರ ಅಧ್ಯಕ್ಷ ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಧ್ವಜಾರೋಹಣಗೈದು ಸಂಸ್ಥೆಗೆ ರೂ. 25 ಸಾವಿರದ ಚೆಕ್ಕನ್ನು ನೀಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪುರವರು ಮಾತನಾಡಿ ಸಹಕಾರಿ ಎಲ್ಲರೂ ಇವತ್ತು ಒಗ್ಗೂಡಿದ್ದೇವೆ. ಎಲ್ಲಾ ಸಹಕಾರಿಗಳ ಸಹಕಾರದಿಂದ ಇವತ್ತು ಸಹಕಾರಿ ಸಪ್ತಾಹದ ಸಮಾರೋಪ ಯಶಸ್ವಿಯಾಗಿದೆ. ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಈ ಸಂಘವನ್ನು ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಶಾಸಕಿ ಕು. ಭಾಗೀರಥಿ ಮುರುಳ್ಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶಿಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ರೈತರಿಗೆ ತೊಟ್ಟಿಲಿನಿಂದ ಚಟ್ಟದವರೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಸಹಕಾರಿ ಸಂಘ ನೀಡುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಸೌಲಭ್ಯಗಳನ್ನು ನೀಡಲು ಸತಾಯಿಸಿದರೆ ಸಹಕಾರಿ ಸಂಘಗಳು 0% ಮತ್ತು 3% ಬಡ್ಡಿ ದರದಲ್ಲಿ ಸದಸ್ಯರಿಗೆ ಸಾಲ ವಿತರಿಸಿ ರೈತರಿಗೆ ಬೆನ್ನೆಲುಬಾಗಿ ನಿಂತಿದೆ ಎಂದರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್. ಎನ್. ಮನ್ಮಥ 2025 ರ ಕ್ಯಾಲೆಂಡರ್ ಬಿಡುಗಡೆ ಮಾಡಿ ಸಹಕಾರಿ ಚಳವಳಿಯ ಮೂಲಕ ಸಹಕಾರಿ ಸಂಘ ಬೆಳೆದು ಬಂದಿದೆ. ಮನಸ್ಸು ಮಾಡಿದರೆ ಒಂದು ಸಹಕಾರಿ ಸಂಘ ಇಡೀ ಗ್ರಾಮ, ತಾಲೂಕಿಗೆ ಅನುಕೂಲವಾಗುವ ಕಾರ್ಯಗಳನ್ನು ಮಾಡಲು ಸಾಧ್ಯ ಎಂದರು. ಕ್ಯಾಂಪ್ಕೋ ಮಂಗಳೂರು ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ ನೂತನ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿ ರೈತರು ಬೆಳೆದ ಅಡಿಕೆಗೆ ರೂ. 400 ರಿಂದ 500ರ ಗಡಿಯಲ್ಲಿದೆ ಎಂದಾದರೆ ಅದಕ್ಕೆ ಕ್ಯಾಂಪ್ಕೋ ಕಾರಣ ಎಂದರು.
ಪುತ್ತೂರು ಸಹಕಾರ ಸಂಘಗಳ ಉಪವಿಭಾಗ ಸಹಾಯಕ ನಿಬಂಧಕರಾದ ಎಸ್.ಎಂ ರಘು, ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ, ಕಳಂಜ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ಬೇರಿಕೆ, ಬಾಳಿಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪಾವನ ಜೋಗಿಬೆಟ್ಟು ಮತ್ತು ಸಂಘದ ನಿರ್ದೇಶಕರಾದ ಎನ್. ವಿಶ್ವನಾಥ ರೈ, ಸುಭಾಶ್ಚಂದ್ರ ರೈ ತೋಟ, ಭಾರತೀಶಂಕರ ಆದಳ, ಮೇದಪ್ಪ ಗೌಡ ತಂಟೆಪ್ಪಾಡಿ, ಸುಬ್ರಹ್ಮಣ್ಯ ಕಾವಿನಮೂಲೆ, ಶುಭ ಕುಮಾರ್ ಬಾಳೆಗುಡ್ಡೆ, ಶ್ರೀಮತಿ ಮಾಲಿನಿ ಪ್ರಸಾದ್, ಶ್ರೀಮತಿ ಪುಷ್ಪಾವತಿ ಬಾಳಿಲ ಹಾಗೂ ಶ್ರೀಮತಿ ಪಂಕಜಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಮಾಜಿ ಅಧ್ಯಕ್ಷರುಗಳಾದ ಕೆದ್ಲ ನರಸಿಂಹ ಭಟ್, ವಾರಣಾಶಿ ಗೋಪಾಲಕೃಷ್ಣ, ಪಿ.ಜಿ.ಎಸ್.ಎನ್ ಪ್ರಸಾದ್, ರಾಧಾಕೃಷ್ಣ ಕೋಟೆ, ಎನ್. ವಿಶ್ವನಾಥ ರೈ ಮತ್ತು ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶಂಕರನಾರಾಯಣ ಭಟ್ ನಡುಮನೆ ಮತ್ತು ಕೆ. ವೆಂಕಪ್ಪಯ್ಯ, ವಿವಿಧ ಸಹಕಾರಿ ಸಂಸ್ಥೆಗಳ ನಿವೃತ್ತ ಸಿಬ್ಬಂದಿಗಳಾದ ರವೀಂದ್ರ ರೈ ಬೆಳ್ಳಾರೆ, ಕೆ.ಸಿ. ದಿನೇಶ್ ಸುಳ್ಯ, ಶಿವಪ್ರಸಾದ್, ಕುಮಾರ ಸಿ.ಹಚ್, ಕೃಷ್ಣ ಬಾಳಿಲರನ್ನು ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ಎಸ್.ಎನ್. ಮನ್ಮಥರನ್ನು ಸನ್ಮಾನಿಸಲಾಯಿತು. ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಸಿಬ್ಬಂದಿ ಶ್ರೀಮತಿ ಗೀತಾಶ್ರೀ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್ ತಡಗಜೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಸಂಘದ ವರದಿ ವಾಚಿಸಿದರು. ಸಂಘದ ನಿರ್ದೇಶಕರಾದ ಬಿ. ಸುಭಾಶ್ಚಂದ್ರ ರೈ ತೋಟ ಸ್ವಾಗತಿಸಿ, ನಿರ್ದೇಶಕ ಅಜಿತ್ ರಾವ್ ಕಿಲಂಗೋಡಿ ವಂದಿಸಿದರು. ಉದ್ಯಮಿ ವಸಂತ ಶೆಟ್ಟಿಯವರು ಅಂದಾಜು ರೂ. 1.5ಲಕ್ಷ ವೆಚ್ಚದಲ್ಲಿ ಸಂಘಕ್ಕೆ ಕೊಡುಗೆಯಾಗಿ ನೀಡಿದ ಶವ ಸಂಸ್ಕಾರದ ಪೆಟ್ಟಿಗೆಯನ್ನು ಎಸ್.ಎನ್. ಮನ್ಮಥ ತೆಂಗಿನಕಾಯಿ ಒಡೆದು ಉದ್ಘಾಟಿಸಿದರು. ಸಂಘದ ಸಿಬ್ಬಂದಿಗಳಾದ ಗೀತಾ ಮತ್ತು ಬಳಗದವರು ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ರಾಮಚಂದ್ರ ಭಟ್ ಮುಗುಳಿ ಮತ್ತು ನಿರ್ದೇಶಕ ಅಜಿತ್ ರಾವ್ ಕಿಲಂಗೋಡಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಹಕಾರಿ ಸಂಸ್ಥೆಗಳ ಅಧ್ಯಕ್ಷರುಗಳು, ನಿರ್ದೇಶಕರು, ಸಿಇಒ ಮತ್ತು ಸಿಬ್ಬಂದಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಮಧ್ಯಾಹ್ನ ಭೋಜನದ ಬಳಿಕ ಯಕ್ಷಗಾನ ತಾಳಮದ್ದಳೆ ವೀರಮಣಿ ಕಾಳಗ ನಡೆಯಲಿದೆ. ಜಿಲ್ಲೆಯ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ.