ನೂತನ ಉದ್ಯಾನವನಕ್ಕೆ ಸರದಾರ ವಲ್ಲಭಭಾಯಿ ಪಟೇಲ್ ನಾಮಕರಣ ಮಾಡುವಂತೆ ರಾಷ್ಟ್ರಾಭಿಮಾನಿಗಳ ಬಳಗದವರಿಂದ ಮನವಿ

0

ಸುಳ್ಯ ನಗರ ಪಂಚಾಯತ್ ವತಿಯಿಂದ ಜ್ಯೋತಿ ಸರ್ಕಲ್ ನಿಂದ ನಿರೀಕ್ಷಣಾ ಮಂದಿರದ ರಸ್ತೆಯ ಬಲಬದಿಯಲ್ಲಿ ನೂತನವಾಗಿ ನಿರ್ಮಿಸಿದ ಉದ್ಯಾನವನಕ್ಕೆ ಸರ್ದಾರ್ ವಲ್ಲಭಾಯಿ ಪಟೇಲ್ ನಾಮಕರಣ ಮಾಡುವಂತೆ ಹಾಗೂ ಪುತ್ಥಳಿ ನಿರ್ಮಿಸುವಂತೆ ಸುಳ್ಯರಾಷ್ಟ್ರಾಭಿಮಾನಿಗಳ ಬಳಗದ ವತಿಯಿಂದ ಇಂದು ಮನವಿ ನೀಡಲಾಯಿತು.
ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ ರವರಲ್ಲಿ
ಮನವಿ ಪತ್ರವನ್ನು ರಾಷ್ಟ್ರಾಭಿಮಾನಿಗಳ ಬಳಗದ ಸಂಚಾಲಕ ಉಮೇಶ್ ಪಿ.ಕೆ ಯವರು ಸಲ್ಲಿಸಿದರು.


ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಭಾಸ್ಕರ್ ರಾವ್, ಶ್ರೀದೇವಿ ನಾಗರಾಜ ಭಟ್, ನ್ಯಾಯವಾದಿ ಜಗದೀಶ್, ನಾರಾಯಣ ಎಸ್ ಎಂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.