ಕೆ.ವಿ.ಜಿ ಕಾನೂನು ಕಾಲೇಜಿನಲ್ಲಿ ಒಂದು ದಿನದ ವಿಶೇಷ ಕಾರ್ಯಾಗಾರ

0

ನ.21ರಂದು ಸುಳ್ಯದ ಕೆ.ವಿ.ಜಿ ಕಾನೂನು ಕಾಲೇಜಿನ ಸಭಾಂಗಣದಲ್ಲಿ “ವಿದೇಶದಲ್ಲಿ ವಿದ್ಯಾಭ್ಯಾಸ ತಿಳುವಳಿಕೆ ಮತ್ತು ಕಾನೂನು ನಿಯಮಗಳು” ಕುರಿತು ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ। ಉದಯಕೃಷ್ಣ ಬಿ, ಮುಖ್ಯ ಅತಿಥಿಗಳಾಗಿ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಕೆ ವಿ ದಾಮೋದರ ಗೌಡ, ಕಾಲೇಜಿನ ಕಾನೂನು ನೆರವು ಸಮಿತಿಯ ಸಂಯೋಜಕಿ ಶ್ರೀಮತಿ. ಕಲಾವತಿ ಎಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ವಿಶ್ವವಿದ್ಯಾನಿಲಯ ವಲಯ ಸಂಪರ್ಕಾಧಿಕಾರಿ ಕೆಕ್ಕಿ ತಿವಾರಿ ಯವರು ಕಾರ್ಯಾಗಾರವನ್ನು ನಡೆಸಿಕೊಟ್ಟರು.

ವಿದ್ಯಾರ್ಥಿನಿಯರಾದ ಕು. ಪ್ರಲೋಕ್ಷ ಎಲ್ ಪಿ ಹಾಗು ಕು. ಶ್ವೇತಲ್ ಬಿ ಆರ್. ಪ್ರಾರ್ಥಿಸಿದರು. ವಿದ್ಯಾರ್ಥಿನಿ ಕು. ನಂದನ ಎಸ್ ಪಿ ಸ್ವಾಗತಿಸಿ, ಅನೀಶ ವಂದಿಸಿದರು. ವಿದಾರ್ಥಿ ಕೃತನ್ ಕೆ ಕೆ ಕಾರ್ಯಕ್ರಮ ನಿರೂಪಿಸಿದರು.