ಮುಂಜಾನೆ ರಸ್ತೆಯಂಚಿಗೆ ಬಂದ ಕಾಡಾನೆ ಹಿಂಡು
ಮೂರು ದಿನದ ಹಿಂದೆ ಹೈದಂಗೂರು ಭಾಗಕ್ಕೆ ಬಂದಿದ್ದ ಕಾಡಾನೆಗಳ ಹಿಂಡು ಇಂದು ಮತ್ತೆ ಇದೇ ಭಾಗದಲ್ಲಿ ಕಾಣಿಸಿಕೊಂಡಿದೆ.
ಹೈದಂಗೂರು ಕಡೆಯಿಂದ ನ.19ರಂದು ಕೊಡಪಾಲ ಭಾಗವಾಗಿ ಉಬರಡ್ಕ ಕಡೆಗೆ ತೆರಳಿದ್ದ ಕಾಡಾನೆಗಳು ಬುಧವಾರದ ದಿನ ಇದೇ ಕಾಡಿನ ಇನ್ನೊಂದು ಭಾಗ ಮೈರಾಜೆ ಕಡೆಗೆ ಹೋಗಿ ಕೃಷಿ ನಾಶ ಪಡಿಸಿದ್ದವು. ಇಂದು ಮುಂಜಾನೆ ಮತ್ತೆ ಹೈದಂಗೂರು ರಸ್ತೆಯಂಚಿಗೆ ಬಂದಿದ್ದು, ಮುಂಜಾನೆ 4 ಗಂಟೆಯ ವೇಳೆಗೆ ಆನೆಗಳ ಕೂಗು ಸ್ಥಳೀಯರಿಗೆ ಕೆಳಿಸಿದೆ.
ಇದೀಗ ಕಾಡಾನೆಗಳು ಹೈದಂಗೂರು – ಕೊಡಪಾಲ – ಮೈರಾಜೆ ಕಾಡಿನ ಮಧ್ಯ ಭಾಗದಲ್ಲಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ದೊಡ್ಡತೋಟ – ಮರ್ಕಂಜ ರಸ್ತೆಯಲ್ಲಿ ರಾತ್ರಿ ವೇಳೆ ತೆರಳುವಾಗ ಸಾರ್ವಜನಿಕರು ಎಚ್ಚರ ವಹಿಸುವ ಅಗತ್ಯವಿದೆ.