68 ನೇ ರಾಷ್ಟ್ರ ಮಟ್ಟದ ಬಾಲಕ ಬಾಲಕಿಯರ ಅತ್ಲೇಟಿಕ್ಸ್ ಪಂದ್ಯಾವಳಿಯು ಉತ್ತರ ಪ್ರದೇಶದ ಲಕ್ನೋ ದಲ್ಲಿ ನ.26 ರಿಂದ 30 ರ ವರೆಗೆ ಆಯೋಜಿಸಲಾಗಿದ್ದು ಕ್ರೀಡಾಕೂಟ ದಲ್ಲಿ ಭಾಗವಹಿಸುವ ರಾಜ್ಯ ಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳ ಸುರಕ್ಷತೆ ಹಾಗೂ ಬಾಲಕಿಯರ ತಂಡದ ಮೇಲ್ವಿಚಾರಕರಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಪ್ರೌಢ ಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಪಿ ಇವರನ್ನು ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಇವರು ನೇಮಕ ಮಾಡಿರುತ್ತಾರೆ.
ಪುಪ್ಪಾವತಿ ಪಿ ಇವರು ಸುಳ್ಯ ತಾಲೂಕು ಐವತ್ತೊಕ್ಲು ಗ್ರಾಮದ ದಿ/ಬಾಳಪ್ಪ ಗೌಡ ಪುರಿಯಮನೆ ಹಾಗೂ ಶ್ರೀಮತಿ ಮೀನಾಕ್ಷಿ ಇವರ ಪುತ್ರಿಯಾಗಿದ್ದು ಪಂಜ ಗ್ರಾಮಪಂಚಾಯತ್ ಸದಸ್ಯರಾದ ಜಗದೀಶ್ ಪುರಿಯ ಇವರ ಸಹೋದರಿ ನಿಸರ್ಗ ಎಂಟರ್ಪ್ರೈಸ್ ಮಾಲಕರಾದ ಮನೋಜ್ ಕುಮಾರ್ ಬಿ ಆರ್ ಇವರ ಧರ್ಮಪತ್ನಿ.
ಇವರು ರಾಜ್ಯ ಮಟ್ಟದ ವಾಲಿಬಾಲ್ ತೀರ್ಪುಗಾರರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಭಾರತ ಸೇವಾದಳದ ಕೇಂದ್ರನಾಯಕ ತರಬೇತಿ ಪಡೆದ ಜಿಲ್ಲೆಯ ಏಕೈಕ ಮಹಿಳೆಯಾಗಿದ್ದಾರೆ. ಭಾರತ ಸೇವಾದಳದ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ 17 ವರ್ಷಗಳ ಕಾಲ ಪುತ್ತೂರು ತಾಲೂಕು ಭಾರತ ಸೇವಾದಳದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದು, 23 ವರ್ಷ ಸ.ಹಿ.ಪ್ರಾ.ಶಾಲೆ ಭಕ್ತಕೋಡಿಯಲ್ಲಿ ಕರ್ತವ್ಯ ನಿರ್ವಹಿಸಿ ಭಡ್ತಿಹೊಂದಿ .ಕೆ.ಪಿ.ಎಸ್.ಬೆಳ್ಳಾರೆಯಲ್ಲಿ ದೈ.ಶಿ.ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.