ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಮತ್ತು ಮುಳ್ಳುಗುಳಿಗನ ಕಟ್ಟೆಗೆ ಹಲವಾರು ವರ್ಷಗಳಿಂದ ಪ್ರತೀದಿನ ಸಂಜೆ ದೀಪ ಇಡುತ್ತಿದ್ದ ಕಳಂಜ ಗ್ರಾಮದ ಕಳಂಜ ರಾಮಣ್ಣ ನಾಯ್ಕ ಎಂಬವರು ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾದರು. ಇವರಿಗೆ 58 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಸರಸ್ವತಿ, ಪುತ್ರ ಯತೀಶ, ಪುತ್ರಿ ಗುಣವತಿ ಮತ್ತು ಸಹೋದರರು, ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.