ಸುಳ್ಯ ತಾಲೂಕಿನಲ್ಲಿರುವ ಆಧಾರ್ ಕಾರ್ಡ್ ಸಮಸ್ಯೆ ಪರಿಹಾರಕ್ಕಾಗಿ 15 ದಿನಗಳ ಕ್ಯಾಂಪ್ ಯೋಜನೆ ಮಾಡುವಂತೆ ನ.ಪಂ. ಸದಸ್ಯ ರಿಯಾಜ್ ಕಟ್ಟೆಕಾರ್ ರವರು ಸುಳ್ಯ ಪ್ರಧಾನ ಅಂಚೆ ಕಚೇರಿ ಮುಖ್ಯಸ್ಥರಿಗೆ ಮನವಿ ಮಾಡಿದ್ದಾರೆ.
ನ.27ರಂದು ಮನವಿ ಸಲ್ಲಿಸಿರುವ ಅವರು, ಅಂಚೆ ಕಚೇರಿಯಲ್ಲಿ ಆಧಾರ್ ತಿದ್ದು ಪಡಿ, ಹೊಸ ಆಧಾರ್ ಕಾರ್ಡ್ ಮಾಡುವ ವ್ಯವಸ್ಥೆ ಇದೆ. ಇಲ್ಲಿ ದಿನವೊಂದಕ್ಕೆ 15 ಮಂದಿಗೆ ಮಾತ್ರ ಅವಕಾಶ ಸಿಗುತಿದ್ದು, ನೂರಾರು ಮಂದಿ ಬಂದು ವಾಪಾಸ್ಸಾಗುತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರಿಗೆ ಸಮಸ್ಯೆಯಾಗುತಿದ್ದು, ಇದರ ಪರಿಹಾರವಾಗಿ 15 ದಿನಗಳ ಆಧಾರ್ ಕ್ಯಾಂಪ್ ಮಾಡಿದರೆ ಜನರಿಗೆ ಉಪಯೋಗವಾಗಲಿದೆ. ಕ್ಯಾಂಪ್ ಆಯೋಜನೆಗೂ ಮೊದಲು ಈ ಕುರಿತು ಪ್ರಚಾರ ನಡೆಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ಶಿಹಾಬ್ ಕೇರ್ಪಳ ಜತೆಗಿದ್ದರು.