ನ.26 ರಂದು ಸುಳ್ಯ ರೈತ ಉತ್ಪಾದಕ ಸಂಸ್ಥೆಯಿಂದ ಕಾಫಿ ಮಂಡಳಿ ಚೆಟ್ಟಳ್ಳಿ ಗೆ ಭೇಟಿ ನೀಡಿ, ಕಾಫಿ ಮಂಡಳಿಯ ಅಧ್ಯಕ್ಷರ ಜೊತೆ ದಕ್ಷಿಣಕನ್ನಡದಲ್ಲಿ ಕಾಫಿ ಬೆಳೆಯುತ್ತಿರುವ ಕುರಿತು ಚರ್ಚಿಸಲಾಯಿತು ಹಾಗೂ ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಮೂಲಕ ಕ್ಲೋನಿಂಗ್ (Cloning method) ವಿಧಾನದ ಮೂಲಕ ಕಾಫಿ ಗಿಡದ ನರ್ಸರಿಯನ್ನು ಪ್ರಾರಂಭಿಸುವಂತೆ ಸೂಚಿಸಿದ್ದು ಈ ಕುರಿತು FPO ಚಿಂತನೆ ನಡೆಸುತ್ತಿದೆ.
ಈ ಸಂದರ್ಭದಲ್ಲಿ ಸುಳ್ಯ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀಮತಿ ಸುಹಾನ ಪಿ ಕೆ, ಸಹಾಯಕ ತೋಟಗಾರಿಕೆ ಅಧಿಕಾರಿಯಾದ ಅರಬಣ್ಣ ಪೂಜೇರಿ
ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರಾದ ವೀರಪ್ಪ ಗೌಡ ಕೆ, ನಿರ್ದೇಶಕರಾದ ಜಯರಾಮ ಎಂ, ಸುರೇಶ್ ರೈ ಅಗಲ್ಪಾಡಿ, ರಾಮಕೃಷ್ಣ ಬೆಳ್ಳಾರೆ ಮತ್ತು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹರೀಶ್ ಕೆ ಹಾಜರಿದ್ದರು.