ಸಂಪಾಜೆ ಗ್ರಾಮ ಪಂಚಾಯತ್ ಉದ್ಯೋಗ ಖಾತ್ರಿ ಗ್ರಾಮ ಸಭೆ

0

ಸಂಪಾಜೆ ಗ್ರಾಮ ಪಂಚಾಯತ್ ಉದ್ಯೋಗ ಖಾತ್ರಿ ಯೋಜನೆ ಗ್ರಾಮ ಸಭೆಯು ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು ಅವರ ಅಧ್ಯಕ್ಷತೆಯಲ್ಲಿ ನ.27 ರಂದು ನಡೆಯಿತು.

ಪಂಚಾಯತ್ ಅಬಿವೃದ್ದಿ ಅಧಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಕ್ಕೆತರುವ ಬಗ್ಗೆ ಚರ್ಚೆ ನಡೆಯಿತು. ಇಂಜಿನಿಯರ್ ಸುಧನ್ವ ಕೃಷ್ಣ ಅವರು ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಕೇಳಿ ಕಾಮಗಾರಿಗಳ ಮಾಹಿತಿ ಸಂಗ್ರಹ ಮಾಡಿದರು.

ಸಭೆಯಲ್ಲಿ ಯೋಜನೆ ಅನುಷ್ಠಾನಕ್ಕೆ ಮೊದಲಿನ ಹಾಗೆ ನರೇಗಾ ಯೋಜನೆ ಕಾಮಗಾರಿ ಮಾಡಲು ಅವಕಾಶ ಕೊಡಬೇಕು.ಕೃಷಿಕರಿಗೆ ಕೃಷಿ ಭೂಮಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಅವಕಾಶ ಕೊಡಬೇಕು ಅಂಗನವಾಡಿ ಕೇಂದ್ರಗಳಿಗೆ ಆವರಣ ಗೋಡೆ ನಿರ್ಮಾಣಕ್ಕೆ ಅವಕಾಶ ಕೊಡಬೇಕು. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಗ್ರಾಮದಲ್ಲಿ ಬಾವಿ ಕೆರೆಯಲ್ಲಿ ಹೂಳು ತುಂಬಿದ್ದು ಉದ್ಯೋಗ ಖಾತ್ರಿ ಯೋಜನೆಯಡಿ ಹೂಳು ತೆಗೆಯಲು ಅವಕಾಶ ನೀಡಬೇಕು ,ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ ಕೂಲಿ 500 ಮಾಡಲು ನಿರ್ಣಯ ಮಾಡಲಾಯಿತು.

ಸಭೆಯಲ್ಲಿ ಸೊಸೈಟಿ ನಿರ್ದೇಶಕರಾದ ಹಮೀದ್ ಅವರು ಈ ಭಾಗದ ಬಾಳೆ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸ್ಥಳೀಯ ಬಾಳೆ ಕೃಷಿಗೆ ಅವಕಾಶ ನೀಡಬೇಕು. ಕೃಷಿ ಸಖಿ ಮೋಹಿನಿ ಹಳೆ ಬಾವಿ ಕೆರೆ ಅಭಿವೃದ್ಧಿಗೆ ಅವಕಾಶ ಕಲ್ಪಿಸುವಂತೆ ಕೇಳಿಕೊಂಡರು ಉಜಿರಿ ಕಣಿ ಅಗಲ ಹೆಚ್ಚಾಗಿದೆ ಸರಿ ಪಡಿಸುವಂತೆ ಸವಿತಾ ರೈ ಅಬೂಸಾಲಿ, ಗಣಪತಿ ಭಟ್ ತೋಟಗಾರಿಕೆ ಬೆಳೆ ಬಗ್ಗೆ ಹೆಚ್ಚು ಗಮನ ಹರಿಸಲು ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದರು.
ರಬ್ಬರ್ ತೋಟಲ್ಲಿ ಕಾಫಿ ಗಿಡ ನೆಡುವ ಬಗ್ಗೆಯೂ ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್. ಕೆ.ಹನೀಫ್ ಸದಸ್ಯರುಗಳಾದ ಜಿ. ಕೆ.ಹಮೀದ್ ಗೂನಡ್ಕ. ಅಬೂಸಾಲಿ , ರಜನಿ ಶರತ್, ಸುಂದರಿ, ವಿಮಲ ಪ್ರಸಾದ್, ಅನುಪಮ ಸುಶೀಲ , ಆಶಾ ಕಾರ್ಯಕರ್ತೆಯರಾದ ಸೌಮ್ಯ,ಪ್ರೇಮಲತಾ, ಆಶಾ ವಿನಯ್ ಕುಮಾರ್ ,ಮೋಹನಾಂಗಿ ಉಮೇಶ್ ಆರೋಗ್ಯ ಇಲಾಖೆಯ ಚಿತ್ರಾ.ಐ. ಗುರುವಪ್ಪ ಉಪಸ್ಥಿತರಿದ್ದರು .

ಕೃಷಿ ಸಖಿ ಮೋಹಿನಿ ಕಾರ್ಯಕ್ರಮ ನಿರೂಪಿಸಿ , ಉದ್ಯೋಗ ಮಿತ್ರ ಸವಿತಾ ಕಿಶೋರ್ ವಂದಿಸಿದರು.