ಅಡ್ಪಂಗಾಯ ಶಾಲೆಯಲ್ಲಿ ಮೆಟ್ರಿಕ್ ಮೇಳ

0

ಜ. 08 ರಂದು ಅಜ್ಜಾವರ ಗ್ರಾಮದ ಅಡ್ಪಂಗಾಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ ಆಯೋಜಿಸಲಾಯಿತು.


ಒಟ್ಟು 18 ಅಂಗಡಿಗಳು ಮಕ್ಕಳಿಂದ ತೆರೆಯಲ್ಪಟ್ಟವು .ಮಕ್ಕಳು ಬಹಳ ಆಸಕ್ತಿಯಿಂದ ,ಚುರುಕುತನದಿಂದ ವ್ಯಾಪಾರ, ವ್ಯವಹಾರ ಜ್ಞಾನ ಪ್ರದರ್ಶಿಸಿದರು.
ಅಧ್ಯಾಪಕ ವೃಂದ ದವರಾದ ಸುರೇಖಾ ರೈ ,ನರ್ಮದಾ, ವೀಣಾ, ಸ್ವಪ್ನ, ಶ್ವೇತಾ ಮಕ್ಕಳಿಗೆ ಮಾರ್ಗದರ್ಶನ ನೀಡಿದರು.SDMC ಸದಸ್ಯರು,ಪೋಷಕರು , ವಿದ್ಯಾಭಿಮಾನಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.