ಇತ್ತೀಚೆಗೆ ನಿಧನರಾದ ಶಿವಣ್ಣ ಗೌಡ ಮೇಲಡ್ತಲೆಯವರ ಶ್ರದ್ಧಾಂಜಲಿ ಸಭೆಯು ಮೇಲಡ್ತಲೆ ಮನೆಯಲ್ಲಿ ಇಂದು ನಡೆಯಿತು. ಹರೀಶ್ಚಂದ್ರ ಅಡ್ತಲೆ ಹಾಗೂ ಭವಾನಿಶಂಕರ ಅಡ್ತಲೆಯವರು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ವೆಂಕಮ್ಮ ಅಡ್ತಲೆ, ಮಕ್ಕಳಾದ ಶ್ರೀಮತಿ ರಾಜೀವಿ ಶ್ರೀಧರ ಕಿರಿಭಾಗ, ಜಯರಾಮ ಅಡ್ತಲೆ, ಶ್ರೀಮತಿ ಜಯಂತಿ ಹರೀಶ್ಚಂದ್ರ ಅಡ್ತಲೆ, ಪ್ರಭಾಕರ ಅಡ್ತಲೆ, ಸುಧಾಕರ ಅಡ್ತಲೆ, ತೀರ್ಥಕರ ಅಡ್ತಲೆ, ಮೊಮ್ಮಕ್ಕಳು, ಬಂದುಗಳು ಹಾಗೂ ಊರವರು ಉಪಸ್ಥಿತರಿದ್ದರು.