ಐನೆಕಿದು ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಗುದ್ದಲಿಪೂಜೆ

0


ಐನೆಕಿದು ಗ್ರಾಮದಲ್ಲಿ ೧೯೮೪ ರಲ್ಲಿ ಪ್ರಾರಂಭವಾದ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡ ರಚಿಸಲು ಶಿವಕುಮಾರ್ ಕೂಜುಗೋಡುರವರು ೧೦ ಸೆನ್ಸ್ ಸ್ಥಳವನ್ನು ದಾನವಾಗಿ ನೀಡಿದ್ದು ಅದರಲ್ಲಿ ನೂತನ ಕಟ್ಟಡ ರಚಿಸಲು ಎಂ ಅರ್.ಪಿ. ಎಲ್ ನಿಂದ ೨೨ ಲಕ್ಷ ರೂಪಾಯಿ ಮಂಜೂರುಗೊಂಡಿದೆ. ಅದರ ಕಾಮಗಾರಿಗೆ ನವಂಬರ್ ೨೫ ರಂದು ಶ್ರೀಮತಿ ರೂಪ ಶಿವಕುಮಾರ ಕೂಜುಗೋಡು ದೀಪ ಬೆಳಗಿಸಿ ಕಾಮಗಾರಿಗೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಜೆ., ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಗಿರೀಶ್ ಪೈಲಾಜೆ, ಐನಕಿದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನವೀನ್ ಕಟ್ರಮನೆ, ನಿಸರ್ಗ ಯುವಕ ಮಂಡಲ ಇದರ ಅಧ್ಯಕ್ಷ ಕಾರ್ತಿಕ್ ಕೂಜುಗೋಡು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೊಲ್ಲಮೊಗರು ವಲಯದ ಮೇಲ್ವಿಚಾರಕಿ ಶ್ರೀಮತಿ ಉಷಾ, ಐನೆಕಿದು ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಕುಮಾರಿ, ಐನೆಕಿದು ಸುಬ್ರಹ್ಮಣ್ಯ ಪಿಎಸಿ ಬ್ಯಾಂಕಿನ ಅಧ್ಯಕ್ಷ ಜಯಪ್ರಕಾಶ ಕೂಜುಗೋಡು, ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಸದಸ್ಯರಾದ ಸತೀಶ್ ಕೂಜುಗೋಡು, ನಿವೃತ್ತ ಪೊಲೀಸ್ ಕೃಷ್ಣಪ್ಪ ಗೌಡ ಕುದ್ಕುಳಿ, ಗುಣವರ್ಧನ ಕೆದಿಲ ಉಪಸಿತರಿದ್ದರು.


ಗಣ್ಯರಾದ ನರೇಂದ್ರ ಕೂಜುಗೋಡು, ಕೆ.ವಿ. ಸುಧೀರ್ ಕಟ್ಟೆಮನೆ ಬಾಳುಗೋಡು, ಶಶಿಧರ ಕೂಜುಗೋಡು, ಐನೆಕಿದು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಶ್ರೀಮತಿ ಪ್ರೇಮ ಕೆದಿಲ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಯವರು ಶಾಲಾ ಶಿಕ್ಷಕ ವರ್ಗ ಮಕ್ಕಳ ಪೋಷಕರು ಮತ್ತಿತರರು ಉಪಸ್ಥಿತರಿದ್ದರು. ಕಟ್ಟಡದ ಕಾಮಗಾರಿಯನ್ನು ಗುತ್ತಿಗೆದಾರ ಶ್ರೇಯಸ್ ಮುತ್ಲಾಜೆ ನಿರ್ವಹಿಸಲಿದ್ದಾರೆ. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನೇತ್ರಾವತಿ ಅಂಗಣ ಸ್ವಾಗತಿಸಿದರು. (ವರದಿ:ಡಿ.ಹೆಚ್.)