ಗುತ್ತಿಗಾರು ಪಿಎಂಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಒಂದು ದಿನದ ಇಂಗ್ಲಿಷ್ ಕಾರ್ಯಗಾರವನ್ನು ನ.27ರಂದು ಹಮ್ಮಿಕೊಳ್ಳಲಾಯಿತು.
ಸುಳ್ಯ ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನ ಸಂಚಾಲಕಿ ಗೀತಾಂಜಲಿ ಟಿ.ಜಿ. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು.
೫ ರಿಂದ ೭ ನೇ ತರಗತಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷಾ ಕೌಶಲ್ಯ ಹಾಗೂ ಮಾತನಾಡುವ ಕಲೆಯ ಬಗ್ಗೆ ತಿಳಿಸಿಕೊಟ್ಟರು.
ಫೋನೋಟಿಕ್ಸ್ ಮತ್ತು ವ್ಯಾಕರಣದ ಚಟುವಟಿಕೆ ಮುಖಾಂತರ ಇಂಗ್ಲಿಷ್ ಭಾಷೆ ಸುಲಭ ಅನ್ನುವ ವಿಷಯವನ್ನು ಮಕ್ಕಳಿಗೆ ಮನ ಮುಟ್ಟಿಸಿದರು.
ಬಳಿಕ ಮಧ್ಯಾಹ್ನದ ನಂತರ ೧ ರಿಂದ ೪ನೇ ತರಗತಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಅಭಿನಯ ಗೀತೆಯನ್ನು ಹೇಳಿಕೊಡಲಾಯಿತು.
ಒಟ್ಟು 200 ವಿದ್ಯಾರ್ಥಿಗಳು ಹಾಗೂ 15 ಶಿಕ್ಷಕರು ಕಾರ್ಯಗಾರದ ಉಪಯೋಗ ಪಡೆದುಕೊಂಡರು.
ಶಾಲಾ ಶಿಕ್ಷಕ ವೃಂದ ಸಹಕರಿಸಿದರು.