ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಪ್ರವರ್ತಕರು, ಬ್ಯಾಂಕ್ ಆಪ್ ಬರೋಡ ವಿಜಯ ಗ್ರಾಮ ಸಮಿತಿ ನಾಲ್ಕೂರು, ಯುವಜನ ಸಯುಕ್ತ ಮಂಡಳಿ ಸುಳ್ಯ ಇದರ ಆಶಯದಲ್ಲಿ ನವಂಬರ್ ೨೯ರಂದು ಹಾಲೆಮಜಲಿನ ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ಬ್ಯಾಂಕ್ ಆಫ್ ಬರೋಡದಲ್ಲಿ ಖಾತೆ ತೆರೆಯುವುದು ಮತ್ತು ಮಲ್ಲಿಗೆ ಕೃಷಿ ಮಾಹಿತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಿಜಯ ಗ್ರಾಮ ಸಮಿತಿಯ ಅಧ್ಯಕ್ಷ ಡಿ.ಆರ್. ಉದಯಕುಮಾರ್ ವಹಿಸಿದ್ದರು. ಉದ್ಘಾಟನೆಯನ್ನು ಬ್ಯಾಂಕ್ ಆಫ್ ಬರೋಡ ಸುಬ್ರಹ್ಮಣ್ಯ ಶಾಖೆಯ ವ್ಯವಸ್ಥಾಪಕರಾದ ವಿಶ್ರುತ್ ಕುಮಾರ್ ಕೆ.ಎಸ್. ದೀಪ ಬೆಳಗಿಸಿ, ಬ್ಯಾಂಕಿನಿಂದ ಸಂಘಗಳ ಮತ್ತು ರೈತರಿಗೆ ಸಿಗುವ ಸಾಲ ಮತ್ತು ಸಬ್ಸಿಡಿಯ ಬಗ್ಗೆ ಮಾಹಿತಿ ನೀಡಿಶುಭ ಹಾರೈಸಿದರು.
ಇತ್ತೀಚೆಗೆ ಸಿಎಯಲ್ಲಿ ಇಂಟರ್ಮೀಡಿಯಟ್ ನ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿಜಯ ಗ್ರಾಮ ಸಮಿತಿಯ ಸದಸ್ಯ ನಾಗೇಶ್‌ರವರ ಪುತ್ರ ಅವಿನ್ ಇವರನ್ನು ಗೌರವಿಸಲಾಯಿತು. ಮಲ್ಲಿಗೆ ಕೃಷಿಯ ಬಗ್ಗೆ ಶ್ರೀಮತಿ ನೇತ್ರಾವತಿ ಮುರುಳ್ಯರವರು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯ ಶ್ರೀಮತಿ ಅನಿತಾ ಮೆಟ್ಟಿನಡ್ಕ, ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಅಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ, ಪಂಜ ರೈತ ಸಂಪರ್ಕ ಕೇಂದ್ರದ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಕು. ಸ್ಮಿತಾ ಸ್ವಸಹಾಯ ಸಂಘ ಮತ್ತು ಕೃಷಿ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಯುವಜನ ಸಂಯುಕ್ತ ಮಂಡಳಿಯ ಪ್ರಧಾನ ಕಾರ್ಯದರ್ಶಿ ನಮಿತಾ ಹರ್ಲಡ್ಕ, ಆತ್ಮ ರೈತ ಮಿತ್ರ ಸ್ವಸಹಾಯ ಸಂಘದ ಅಧ್ಯಕ್ಷ ಶ್ರೀಮತಿ ಗೀತಾ ಕೆ.ಎಂ. ಸೇರಿದಂತೆ ವಿಜಯ ಗ್ರಾಮ ಸಮಿತಿಯ ಸದಸ್ಯರುಗಳು, ಊರಿನವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಲ್ಲಿಗೆ ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಬ್ಯಾಂಕ್ ಆಫ್ ಬರೋಡದಲ್ಲಿ ನಾಗರಿಕರು ನೂತನ ಖಾತೆ ತೆರೆದುಕೊಂಡರು. ಕಾರ್ಯಕ್ರಮದಲ್ಲಿ ವಿಜಯ ಗ್ರಾಮ ಸಮಿತಿಯ ಕಾರ್ಯದರ್ಶಿ ದಿನೇಶ್ ಹಾಲೆಮಜಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.