ಸದಸ್ಯರ ಅನುಕೂಲಕ್ಕಾಗಿ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರಬ್ಬರ್ ಸ್ಕ್ರಾಪ್ ಖರೀದಿ ಆರಂಭಿಸಲಾಯಿತು. ಸಂಸ್ಥೆಯ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿವರು ನಿರ್ದೇಶಕರಾದ ಧನಂಜಯ ಕೋಡಿ ಇವರಿಗೆ ಪ್ರಥಮ ಬಿಲ್ಲನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಅಶೋಕ ಪಿ ಎಂ ರವರು, ನಿರ್ದೇಶಕರುಗಳಾದ ದೀನರಾಜ್ ಡಿ ಸಿ, ಪ್ರಮೀಳಾ ಬಂಗಾರಕೋಡಿ, ಕಿರಣ ಬಂಗಾರಕೋಡಿ, ಪೆರಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನಂಜಪ್ಪ ನಿಡ್ಯಮಲೆ, ಸದಸ್ಯರಾದ ಪ್ರವೀಣ್ ಮಜಿಕೋಡಿ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.