ಗೀತಾಜಯಂತಿಯ ಪ್ರಯುಕ್ತ ಡಿ.11ರಂದು ಪಂಜ ಪೈಂದೋಡಿ ಶ್ರೀ ಸುಬ್ರಾಯ ದೇವಾಲಯದಲ್ಲಿ ವಿಶೇಷವಾಗಿ ಹವ್ಯಕ ವಲಯ ಪಂಜ ಮತ್ತು ಶಿವಳ್ಳಿ ವಲಯ ಪಂಜ ಇದರ ಸದಸ್ಯ, ಸದಸ್ಯೆಯರಿಂದ ಭಗವದ್ಗೀತೆ 18 ಅಧ್ಯಾಯಗಳ ಪಠಣ ಮತ್ತು ಪ್ರವಚನ ಕಾರ್ಯಕ್ರಮ ಜರುಗಿತು.
ಎರಡು ಗಂಟೆಯ ಈ ಕಾರ್ಯಕ್ರಮದಲ್ಲಿ ಸುಮಾರು ಐವತ್ತು ಮಂದಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.