ಸುಳ್ಯ ಲಯನ್ಸ್ ಕ್ಲಬ್ ,ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದ ಲ್ಲಿ ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನವು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಡಿ.17 ರಂದು ನಡೆಯಲಿದೆ. ಅಲ್ಲದೆ ಅಂಚೆ ಅಪಘಾತ ಆರೋಗ್ಯ ವಿಮಾ ಯೋಜನೆ ನೋಂದಾವಣೆಯು ನಡೆಯಲಿದೆ.















ಆಧಾರ್ ತಿದ್ದುಪಡಿ ಮಾಡಲು ಮೂಲ ದಾಖಲೆ ಪ್ರತಿಯನು ಕಡ್ಡಾಯವಾಗಿ ತರಬೇಕಾಗುವುದು. ಹೊಸ ಆಧಾರ್ ನೋಂದಣಿ, ಹೆಸರು ತಿದ್ದುಪಡಿ, ಜನ್ಮ ದಿನಾಂಕ ತಿದ್ದುಪಡಿ, ವಿಳಾಸ ಬದಲಾವಣೆಯನ್ನು ಮಾಡಿಕೊಡಲಾಗುವುದು. 18 ವರ್ಷದ ಒಳಗಿನವರಿಗೆ ಮಾತ್ರ ಹೊಸ ಆಧಾರ್ ನೋಂದಣಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರಾಮಕೃಷ್ಣ ರೈ ಯವರನ್ನು (ಮೊ: 9448725568) ಸಂಪರ್ಕಿಸಬಹುದು









