ಸಮಾಜ ಸೇವೆಯಲ್ಲಿ ಸುಳ್ಯದ ಆರ್ ಬಿ ಬಶೀರ್, ಶಿಕ್ಷಣ ಸಂಸ್ಥೆ ಪ್ರೋತ್ಸಾಹದಲ್ಲಿ ಉನೈಸ್ ಪೆರಾಜೆ ರವರಿಗೆ ಸನ್ಮಾನ
ಬಂಟ್ವಾಳ ತಾಲೂಕಿನ ಬಾರೆಬೆಟ್ಟು ಮಾದಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯು 91 ವರ್ಷಗಳನ್ನು ಪೂರೈಸಿದ ಪ್ರಯುಕ್ತ ಡಿ. 14 ರಂದು ಕಬಡ್ಡಿ ಪಂದ್ಯಾಟ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಿದ್ದು, ಈ ಸಮಾರಂಭದಲ್ಲಿ ಸುಳ್ಯ ಪೈಚಾರಿನ ಡಾ.ಬಶೀರ್ ಆರ್.ಬಿ.ಮತ್ತು ಉನೈಸ್ ಪೆರಾಜೆ ರವರನ್ನು ಸಾಮಾಜಿಕ ಕ್ಷೇತ್ರದ ಸಾಧನೆ ಮತ್ತು ಶಿಕ್ಷಣ ಪ್ರೋತ್ಸಾಹಕ್ಕೆ ಸನ್ಮಾನಿಸಲಾಯಿತು.
ಶಾಲೆಗಾಗಿ ಮಿಡಿಯಲಿ ನಮ್ಮ ಹೃದಯ ಎಂಬ ದ್ವೇಯ ದಡಿಯಲ್ಲಿ ಈ ಸಂಘಟಕರು ಸಮಾರಂಭವನ್ನು ಹಮ್ಮಿಕೊಂಡಿದ್ದರು.
ಶಾಲಾ ಸಭಾವೇದಿಕೆಯಲ್ಲಿ ಸಂಜೆ 7 ಘಂಟೆಗೆ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರ, ಮಾಧ್ಯಮ ಕ್ಷೇತ್ರ, ಅರೋಗ್ಯ, ಉದ್ದಿಮೆ,ಸಮಾಜ ಸೇವೆ, ಕ್ರೀಡಾ ಕ್ಷೇತ್ರಗಳಿಗೆ ಸೇರಿದ ಸುಮಾರು 30 ಕ್ಕೂ ಹೆಚ್ಚು ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮಾಜಿ ಸಚಿವ ಬಿ.ರಮನಾಥ್ ರೈ, ಪದ್ಮಶ್ರೀ ಪುರಸ್ಕೃತ ಹಾಜಬ್ಬರವರು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಂ ಎಸ್ ಮಹಮ್ಮದ್,ಸೇರಿದಂತೆ ಇನ್ನೂ ಅನೇಕ ಮಂದಿ ಗಣ್ಯರುಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ವೃಂದ, ಹಳೆ ವಿದ್ಯಾರ್ಥಿ ಸಂಫದ ನೌಫಲ್ ವಿಟ್ಲ ಹಾಗೂ ಸರ್ವ ಸದಸ್ಯರುಗಳು ಸಹಕಾರ ನೀಡಿದರು.