ಆಕರ್ಷಕ ಕುಣಿತ ಭಜನೆಯೊಂದಿಗೆ ಪಾಲ್ ಕೊಂಬು ಮೆರವಣಿಗೆ- ಸಾಧಕರಿಗೆ ಸನ್ಮಾನ
ಸುಳ್ಯ ಸಾರ್ವಜನಿಕ
ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಆಶ್ರಯದಲ್ಲಿ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ 30 ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವವು ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ
ಡಿ.14 ರಂದು ಭಕ್ತಿ ಶ್ರದ್ಧೆಯಿಂದ ಜರುಗಿತು.
ಪೂರ್ವಾಹ್ನ ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ ನಾಗರಾಜ್ ಭಟ್ ಮತ್ತು ಸುದರ್ಶನ ಭಟ್ ರವರ ನೇತೃತ್ವದಲ್ಲಿ ಗಣಪತಿ ಹವನವಾಗಿ ದೀಪಾರಾಧನೆಯೊಂದಿಗೆ ಉಷಾ ಪೂಜೆಯು ನಡೆಯಿತು.
ಮಧ್ಯಾಹ್ನ ವಿಶೇಷವಾಗಿ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.
ಸಂಜೆ ಅಯ್ಯಪ್ಪ ವೃತಧಾರಿಗಳ ಪಾಲ್ ಕೊಂಬು ಮೆರವಣಿಗೆಯು ಹಳೆಗೇಟು ಬಳಿಯಿಂದ ಹೊರಟು ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಷ್ಠಾಪಿಸಿರುವ ಅಯ್ಯಪ್ಪ ಸನ್ನಿಧಾನಕ್ಕೆ ಬಾಲಕ ಬಾಲಕಿಯರ ದೀಪಾರಾಧನೆಯೊಂದಿಗೆ ಹಾಗೂ ಆಕರ್ಷಕ ಕುಣಿತ ಭಜನೆಯೊಂದಿಗೆ ,
ಸಿಂಗಾರಿ ಮೇಳ ಮತ್ತು ಕೇರಳದಚೆಂಡೆ ವಾದನ ಮತ್ತು ಸಿಡಿ ಮದ್ದಿನ ಪ್ರದರ್ಶನದೊಂದಿಗೆ ಮುಖ್ಯ ರಸ್ತೆಯಲ್ಲಿ ಸಾಗಿ ಬಂತು.
ಈ ಸಂದರ್ಭದಲ್ಲಿ ಎ.ಕೆ.ಸತೀಶ್ ಆಚಾರ್ಯ ಜಾಲ್ಸೂರು ನೇತೃತ್ವದ ಕಲಾ ಕೇಸರಿ ತಂಡದವರಿಂದ ಭಕ್ತಿ ಗಾನಾರ್ಚನೆ ಎಂಬ ಭಕ್ತಿ ಗೀತಾ ಗಾಯನ ಕಾರ್ಯಕ್ರಮ ನಡೆಯಿತು.
ಬಳಿಕಗುರುಸ್ವಾಮಿಗಳವರ ನೇತೃತ್ವದಲ್ಲಿ ಅಯ್ಯಪ್ಪ ವೃತಧಾರಿಗಳಿಂದ ಮೇಲೆರಿಗೆ ಅಗ್ನಿ ಸ್ಪರ್ಶ ಮಾಡಲಾಯಿತು.
ಈ ಸಂದರ್ಭದಲ್ಲಿ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೇರ್ಪಳ ಮತ್ತು ಶ್ರೀ ಮೂಕಾಂಬಿಕಾ ಭಜನಾ ಮಂದಿರ ಅರಂಬೂರು ಭಜನಾ ಮಂಡಳಿ ಸದಸ್ಯರಿಂದ ಕುಣಿತ ಭಜನಾ ಪ್ರದರ್ಶನವಾಯಿತು.
ಮರುದಿನ ಪ್ರಾತ:ಕಾಲ ಅಯ್ಯಪ್ಪ ವೃತಧಾರಿಗಳಿಂದ ಅಗ್ನಿ ಸೇವೆಯು ನಡೆಯಿತು. ಬಳಿಕಮಹಾಮಂಗಳಾರತಿಯಾಗಿದೀಪವಿಸರ್ಜನೆಯಾಗಿ ಪ್ರಸಾದ ವಿತರಣೆಯಾಯಿತು.
ಸಾಧಕರಿಗೆ ಗೌರವ ಸನ್ಮಾನ:
ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಚೆನ್ನಕೇಶವ ದೇವಸ್ಥಾನದ ಅರ್ಚಕ ಹರಿಪ್ರಸಾದ್ ಕೆದಿಲಾಯ , ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ ನಾಗರಾಜ್ ಭಟ್, ಯಕ್ಷಗಾನ ಸಂಯೋಜಕ ಹಿರಿಯ ಕಲಾವಿದ ಶೇಖರ ಮಣಿಯಾಣಿ ಹಾಗೂ ಗುರುಸ್ವಾಮಿ ದಿನೇಶ್ ಪದವು ಅಡ್ಕಾರ್ ರವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗುರುಸ್ವಾಮಿಗಳಾದ ಶಿವಪ್ರಕಾಶ್ ಅಡ್ಪಂಗಾಯ, ನ್ಯಾಯವಾದಿ ರಾಮಕೃಷ್ಣ ಗೌಡ ಕೊಡಿಯಾಲಬೈಲು, ಸಂತೋಷ್ ಜಟ್ಟಿಪಳ್ಳ, ಅಧ್ಯಕ್ಷ ಜನಾರ್ದನ ದೋಳ, ಕಾರ್ಯದರ್ಶಿ ಸತೀಶ್ ಜಟ್ಟಿಪಳ್ಳ ಉಪಸ್ಥಿತರಿದ್ದರು. ಗುರುಸ್ವಾಮಿ ಶಿವಪ್ರಕಾಶ್ ಅಡ್ಪಂಗಾಯ ಕಾರ್ಯಕ್ರಮ ನಿರ್ವಹಿಸಿದರು.
ರಾತ್ರಿ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಕಳವಾರು ಬಾಳ ಮಂಗಳೂರು ಕಲಾವಿದರಿಂದ
ಕಳವಾರು ಶ್ರೀ ಬೆಂಕಿನಾಥೇಶ್ವರ ಕ್ಷೇತ್ರ ಮಹಾತ್ಮೆಎಂಬ
ತುಳು ಯಕ್ಷಗಾನ
ಬಯಲಾಟ ಪ್ರದರ್ಶನವಾಯಿತು. ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು. ಊರಿನ ಹಾಗೂ ಪರ ಊರಿನ ಭಕ್ತಾದಿಗಳು ಭಾಗವಹಿಸಿದರು.