ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸರಕಾರಿ ಶಾಲೆಗಳಿಗೆ ಬೆಂಚು ಡೆಸ್ಕ್ ಗಳ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ವತಿಯಿಂದ ಎಲಿಮಲೆ ಸರಕಾರಿ ಪ್ರೌಢ ಶಾಲೆಗೆ, ದೇವಚಳ್ಳ ದ. ಕ. ಜಿ. ಪ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ಗುತ್ತಿಗಾರು ಗ್ರಾಮದ ವಳಲಂಬೆಯ ದ. ಕ. ಜಿ. ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ಗುತ್ತಿಗಾರು ಗ್ರಾಮದ ಪಿ. ಎಂ. ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ಗುತ್ತಿಗಾರು ಗ್ರಾಮದ ಪದವಿ ಪೂರ್ವ ಕಾಲೇಜಿನ ಸರಕಾರಿ ಪ್ರೌಢ ಶಾಲೆಗೆ ಒಟ್ಟು ರೂ.3,82,500/- ಮೌಲ್ಯದ ಒಟ್ಟು 45 ಜೊತೆ ಬೆಂಚು ಡೆಸ್ಕ್ ಗಳ ವಿತರಣಾ ಕಾರ್ಯಕ್ರಮವನ್ನು ಎಲಿಮಲೆ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಯವರಾದ ಮಾಧವ ಗೌಡರವರು ಮಾತನಾಡುತ್ತ, ಯೋಜನೆಯ ಹತ್ತು ಹಲವಾರು ಕಾರ್ಯಕ್ರಮಗಳಲ್ಲಿ ಗ್ರಾಮಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಸುಜ್ಞಾನ ನಿಧಿ ಶಿಷ್ಯವೇತನವನ್ನು ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗಳಿಗೆ ವಿತರಣೆ ಮಾಡುತ್ತಿದೆ. ಅದಲ್ಲದೆ ಸರ್ಕಾರಿ ಶಾಲೆಗಳಲ್ಲಿ ಕುಂದುಕೊರತೆ ಇರುವ ಮೂಲಸೌಕರ್ಯಗಳಿಗೆ ಅನುದಾನಗಳನ್ನು ನೀಡುತ್ತಾ ಬಂದಿದೆ. ಇದೀಗ ನಾವು ಸುಳ್ಯ ತಾಲೂಕಿಗೆ ಸಂಬಂಧ ಪಟ್ಟ ಹಾಗೆ ಈ ವರ್ಷದಲ್ಲಿ 20 ಸರಕಾರಿ ಶಾಲೆಗಳಿಗೆ, ರೂ. 14,45,000/- ಮೌಲ್ಯದ 170 ಜೊತೆ ಬೆಂಚು ಡೆಸ್ಕ್ ಗಳನ್ನು ಶೇಕಡಾ 80 ರಷ್ಟು ಅನುದಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಈ ದಿನ ವಿತರಣೆಯನ್ನು ಮಾಡುತ್ತಿದ್ದೇವೆ. ಇದರ ಸದ್ಭಳಕೆಯನ್ನು ಮಕ್ಕಳಿಗೆ ಶಾಲೆಯ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯವರು ನಿರ್ವಹಣೆಯನ್ನು ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಸಂಧ್ಯಾ ಕೆ., ಜನಜಾಗೃತಿ ಗುತ್ತಿಗಾರು ವಲಯ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಧನಂಜಯ ಬಾಳೆತೋಟ, ತಾಲೂಕು ಜನಜಾಗೃತಿ ಸದಸ್ಯರಾದ ಬಾಬು ಗೌಡ ಅಚ್ರಪ್ಪಾಡಿ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್ ಅಂಬೆಕಲ್ಲು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮಾವಿನಕಟ್ಟೆಯ ಅಧ್ಯಕ್ಷ ಭಾನುಪ್ರಕಾಶ್ ತಳೂರು, ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯಾನಂದ ಪಟ್ಟೆ ಹಾಗೂ ಶಿಕ್ಷಕಿ ಹರಿನಾಕ್ಷಿ, ವಳಲಂಬೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನಳಿನಾಕ್ಷಿ, ಗುತ್ತಿಗಾರು ಪ್ರೌಢ ಶಾಲಾ ಶಿಕ್ಷಕಿ ಚೂಡಾಮಣಿ, ಗುತ್ತಿಗಾರು ಪಿ ಎಂ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪೂರ್ಣಿಮಾ, ಸೇವಾಪ್ರತಿನಿಧಿ ಉಷಾಲತಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಸದಸ್ಯರು ಭಾವಹಿಸಿದರು.
ಈ ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಸ್ವಾಗತಿಸಿದರು.