ಯಕ್ಷಗಾನ ನಾಟ್ಯ ಗುರು ಬಾಲಕೃಷ್ಣ ನಾಯರ್ ರವರಿಗೆ ಸನ್ಮಾನ
ಐವರ್ನಾಡು ಶ್ರೀ ಪಂಚಲಿಗೇಶ್ವರ ಯಕ್ಷ ಕಲಾ ತರಬೇತಿ ಕೇಂದ್ರದ ಎಲ್ಲಾ ಮಕ್ಕಳ ರಂಗಪ್ರವೇಶವು ಡಿ. 14 ರಂದು ನಡೆದ ದ. ಜಿ. ಪಂ. ಹಿ. ಪ್ರಾ. ಶಾಲೆ ಐವರ್ನಾಡು ಇದರ ವಾರ್ಷಿಕೋತ್ಸವದ ಸಂದರ್ಭದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡೆಯಿತು.
ಕೇಂದ್ರದ ಮಕ್ಕಳ ರಂಗಪ್ರವೇಶದ ಸಂದರ್ಭದಲ್ಲಿ ಚಕ್ರವ್ಯೂಹ ಎಂಬ ಪ್ರಸಂಗವನ್ನು ನಾಟ್ಯ ಗುರುಗಳಾದ ಬಾಲಕೃಷ್ಣ ನಾಯರ್ ನೀರಬಿದಿರೆ ಯವರ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.
ಇಲ್ಲಿ ಯಕ್ಷಗಾನ ತರಬೇತಿಯು ಒಂದು ವರ್ಷದ ಹಿಂದೆ ಆರಂಭಗೊಂಡಿತ್ತು. ತರಬೇತಿ ನೀಡಿದ ಬಾಲಕೃಷ್ಣ ನಾಯರ್ ಅವರನ್ನು ರಂಗ ಪ್ರವೇಶ ಸಂದರ್ಭ ಸನ್ಮಾನಿಸಲಾಯಿತು.
ಎಲ್ಲಾ ವಿದ್ಯಾರ್ಥಿಗಳ ಪೋಷಕರ ಪರವಾಗಿ ಹಿರಿಯರಾದ ಮೋಹನ್ ಕುಮಾರ್ ಪಾಲೆಪ್ಪಾಡಿ ಇವರು ಗುರುಗಳನ್ನು ಶಾಲು ಹೊದಿಸಿ ಸನ್ಮಾನ ಮಾಡಿದರು. ಶಾಲಾ ಪ್ರಭಾರ ಮುಖ್ಯೋಪಾದ್ಯಾಯಿನಿ ಸರಸ್ವತಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಹೊನ್ನಪ್ಪ ನಾಯ್ಕ ಉದ್ದಂಪಾಡಿ ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕ ವೃಂದ ಮತ್ತು ಎಸ್.ಡಿ. ಎಂ. ಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಕೂಡಾ ನಾಟ್ಯ ಗುರುಗಳನ್ನು ಸನ್ಮಾನಿಸಿದರು.
ಯಕ್ಷಗಾನ ನಡೆಸುವಲ್ಲಿ ಮುಂದಾಳತ್ವ ವಹಿಸಿಕೊಂಡು ಸಹಕರಿಸಿದ ಮತ್ತು ಶಾಲಾ ಮಕ್ಕಳಿಗೆ ನೃತ್ಯವನ್ನು ಅಭ್ಯಾಸ ಮಾಡಿಸಿರುವ ಶ್ರೀಮತಿ ರಾಜೇಶ್ವರಿ ಮಧುಕರ ನಿಡುಬೆ ಇವರನ್ನು ಶಾಲಾ ಅಧ್ಯಾಪಕ ವೃಂದ ಮತ್ತು ಎಸ್.ಡಿ ಎಮ್ ಸಿ ಅಧ್ಯಕ್ಷರು ಸರ್ವ ಸದಸ್ಯರು ಸೇರಿ ಸನ್ಮಾನಿಸಿದರು.
ರಂಗಪ್ರವೇಶದಲ್ಲಿ ಶೈಲಜಾ ಜಯರಾಜ್ ನೀರಬಿದಿರೆ ಸಹಕರಿಸಿದರು. ಯಕ್ಷಗಾನ ಪ್ರದರ್ಶನದ ಅಭ್ಯಾಸ ಸಂದರ್ಭದಲ್ಲಿ ಪೋಷಕರಾದ ಸೌಮ್ಯ ಚಿದಾನಂದ ಉದ್ದಂಪಾಡಿ, ಲತಾ ಹರೀಶ್ ,ದಿವ್ಯ ಗಣೇಶ್ ಮತ್ತು ವಿದ್ಯಾ ಸನತ್ ರವರು ಫಲಹಾರದ ವ್ಯವಸ್ಥೆ ಮಾಡಿದ್ದರು.
ರಂಗ ಪ್ರವೇಶದ ಚಕ್ರವ್ಯೂಹ ಪ್ರಸಂಗದಲ್ಲಿ ಅನನ್ಯ, ಅಂಜನಾ, ಮೌಲಿಕ್, ತನ್ವಿತ, ಕ್ಷಿತಿ, ದೃತಿ, ರುತ್ವಿಕ್, ಹವ್ಯಶ್ರೀ, ನಿಶಾ, ಗೌರವ, ಗ್ರೀಷ್ಮ, ಹೇಮರಾಜ್, ಆದಿತ್ಯ ಕೃಷ್ಣ, ರೂಪೇಶ್, ಅದ್ವೈತ್ ನಂದನ್, ಸಮನ್ವಿ, ಪೂರ್ವಿನ್, ವೈಷ್ಣವಿ, ಅಶ್ವಿನ್, ತಶ್ವಿನ್, ಪರೀಕ್ಷತ್, ಶುಶಾಂಕ್, ಪ್ರಚೇತ್ ಮತ್ತು ಆರ್ಯ ಭಾಗವಹಿಸಿದ್ದರು.