ರೇಶನ್ ಕಾರ್ಡ್ ಸಮಸ್ಯೆ ಹಾಗೂ ಟಿಎ.ಪಿ.ಸಿ.ಎಂ.ಎಸ್. ಗೆ ಬಾಕಿ ಪಾವತಿಗೆ

0

ಆಹಾರ ಸಚಿವರ ಬಳಿಗೆ ನಿತ್ಯಾನಂದ ಮುಂಡೋಡಿ ನೇತೃತ್ವದ ನಿಯೋಗ : ಸಚಿವರ ಭರವಸೆ

ಟಿಎಪಿಸಿಎಂಎಸ್ ಗಳಿಗೆ ಸರಕಾರದಿಂದ ಬರಬೇಕಾದ ಬಾಕಿ ಪಾವತಿಸುವಂತೆ ಹಾಗೂ ರೇಷನ್ ಕಾರ್ಡ್ ಸಮಸ್ಯೆ ಪರಿಹರಿಸುವಂತೆ ಸುಳ್ಯ ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ನಿತ್ಯಾನಂದ ಮುಂಡೋಡಿಯವರ ನೇತೃತ್ವದಲ್ಲಿ ಆಹಾರ ಸಚಿವ ಮುನಿಯಪ್ಪರ ಬಳಿ ನಿಯೋಗ ತೆರಳಿ, ಮನವಿ ಮಾಡಲಾಗಿದೆ.

ಟಿ.ಎ.ಪಿ.ಸಿ.ಎಂ.ಎಸ್. ಉಪಾಧ್ಯಕ್ಷ ಪಿ.ಎಸ್.ಗಂಗಾಧರ್, ಕಾರ್ಯದರ್ಶಿ ಜಯರಾಮ ದೇರಪ್ಪಜ್ಜನಮನೆ, ನಿರ್ದೇಶಕ ಎಸ್.ಸಂಶುದ್ದೀನ್ ಮೊದಲಾದವರಿದ್ದರು.

ಪಡಿತರ ವ್ಯವಸ್ಥೆ ಸರಿಪಡಿಸಬೇಕು‌ ಹಾಗೂ ಹೊಸ ರೇಶನ್ ಕಾರ್ಡ್ ನೀಡುವ‌ ಕುರಿತು ಸಚಿವರ ಗಮನ ಸೆಳೆಯಲಾಯಿತು.

ಮನವಿಗೆ ಸ್ಪಂದಿಸಿದ ಸಚಿವರು ಟಿಎಪಿಸಿಎಂಎಸ್ ಗಳಿಗೆ ಬರಬೇಕಾದ ಬಾಕಿ ಪಾವತಿಯ ಕುರಿತು ಇಲಾಖಾ ಕಾರ್ಯದರ್ಶಿ ಯವರಿಗೆ ಸ್ಥಳದಲ್ಲೇ ಸೂಚನೆ ನೀಡಿದರೆಂದು ತಿಳಿದುಬಂದಿದೆ.

ಬಳಿಕ ಸಹಕಾರ ಸಚಿವ ಕೆ.ಎನ್. ರಾಜಣ್ಣರನ್ನು ಕೂಡಾ ನಿಯೋಗ ಭೇಟಿ ಮಾಡಿದೆ ಎಂದು ತಿಳಿದುಬಂದಿದೆ.