ದೇವರಮಜಲು ವಾರಿಜ ದಾಮೋದರ್ ಮನೆಯಲ್ಲಿ ಶ್ರೀ ಸತ್ಯ ನಾರಾಯಣ ದೇವರ ಪೂಜೆ ಮತ್ತು ಯಕ್ಷಗಾನ ಬಯಲಾಟ

0

ಕೇರ್ಪಡ ದೇವರಮಜಲು ವಾರಿಜದಾಮೋದರ ರವರ ಮನೆಯಲ್ಲಿ ಶ್ರೀ ಮಹಿಷಮರ್ದಿನೀ ಯಕ್ಷಗಾನ ಕಲಾಕೇಂದ್ರ ಕೇರ್ಪಡ ಇಲ್ಲಿಯ ಮಕ್ಕಳಿಂದ ,”ಯಕ್ಷಮಣಿ” ಗಿರೀಶ್ ಗಡಿಕಲ್ಲು ರವರ ನಿರ್ದೇಶನದಲ್ಲಿ ಕದಂಬ ಕೌಶಿಕೆ ಎಂಬ ಯಕ್ಷಗಾನ ಬಯಲಾಟ ಡಿ. 20 ರಂದು ನಡೆಯಿತು,ಅದೇ ದಿನ ಬೆಳಗ್ಗೆ ಗಣಪತಿ ಹವನ ಸಂಜೆ ಶ್ರೀ ಸತ್ಯ ನಾರಾಯಣ ದೇವರ ಪೂಜೆ ನಡೆಯಿತು. ಯಕ್ಷ ಗುರು ಗಿರೀಶ್ ಗಡಿಕಲ್ಲು ರವರನ್ನು ಗುರುತಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಲಾವಿದರಿಗೆ ವೃಕ್ಷ ಗಿಡ ಸ್ಮರಣಿಕೆಯಾಗಿ ವಾರಿಜ ದಾಮೋದರ್ ಕುಟುಂಬ ದವರಿಂದ ನೀಡಲಾಯಿತು.


ಈ ಸಂದರ್ಭದಲ್ಲಿ ಅವಿನಾಶ್ ದೇವರಮಜಲು ಮತ್ತು ಅವರ ಶ್ರೀಮತಿ ಮಮತಾ ಅವಿನಾಶ್,ಮಕ್ಕಳಾದ ನಿನಾದ್, ನಂದನ್ ದೇವರಮಜಲು, ವಾರಿಜ ದಾಮೋದರ ಗೌಡ ಹಾಗೂ ಕುಟುಂಬಸ್ಥರು, ಕಲಾವಿದರ ಪೋಷಕರು,ಯಕ್ಷ ಪ್ರೇಮಿಗಳು, ಊರವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಶ್ರೀದೇವರ ಪ್ರಸಾದ ಸ್ವೀಕರಿಸಿದರು.