ರಾಷ್ಟ್ರಮಟ್ಟದ ಮ್ಯಾಕ್ಸಿಲೊ ಫೇಶಿಯಲ್ ಶಸ್ತ್ರ ಚಿಕಿತ್ಸಕರ ಸಮ್ಮೇಳನದಲ್ಲಿ ಸಂಶೋಧನಾ ಪತ್ರ ಮಂಡನೆ : ಡಾ. ಸುಲೇಖ ರಂಗನಾಥ್‌ರಿಗೆ 3 ನೇ ಸ್ಥಾನ

0

ಡಿ. 12 ರಿಂದ ಡಿ. 14 ರ ವರೆಗೆ ಕೊಲ್ಕತ್ತದ ಬಿಸ್ವ ಬಂಗಾಳ ಕನ್ವೆನ್‌ಷನ್ ಸೆಂಟರ್ ನಲ್ಲಿ ನಡೆದ ರಾಷ್ಟ್ರಮಟ್ಟದ ಮ್ಯಾಕ್ಸಿಲೊ ಫೇಶಿಯಲ್ ಶಸ್ತ್ರ ಚಿಕಿತ್ಸಕರ ಸಮ್ಮೇಳನದಲ್ಲಿ ಡಾ. ಸುಲೇಖ ರಂಗನಾಥ್‌ರವರು ಭಾಗವಹಿಸಿದ್ದರು.


ಇವರು ಸೀಳು ಮತ್ತು ಕ್ರಾನಿಯೊಫೇಶಿಯಲ್ ಶಸ್ತ್ರ ಚಿಕಿತ್ಸೆ ಫೆಲೋಶಿಪ್ಪನ್ನು ಅಶ್ವಿನಿ ಟ್ರೋಮಾ ಸೆಂಟರ್ ಕಟಕ್, ಒರಿಸ್ಸಾ, ಇಲ್ಲಿ ಮುಗಿಸಿ ತನ್ನ ಸಂಶೋಧನಾ ಪತ್ರವನ್ನು ಸಮ್ಮೇಳನದಲ್ಲಿ ಮಂಡಿಸಿದ್ದು ಇವರ ಸಂಶೋಧನಾ ಪ್ರಬಂಧವು 3 ನೇ ಸ್ಥಾನವನ್ನು ಪಡೆದುಕೊಂಡಿದೆ.
ಡಾ ಸುಲೇಖರವರು ಸುಳ್ಯ ಕೆ.ಎಫ್.ಡಿ.ಸಿ.ಯ ನಿವೃತ್ತ ಫ್ಯಾಕ್ಟರಿ ಮೇನೇಜರ್ ಪಿ.ಎಂ.ರಂಗನಾಥ್ ಮತ್ತು ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪದ್ಮಾ ರಂಗನಾಥ್ ದಂಪತಿಯ ಪುತ್ರಿ.