ಸುಳ್ಯದ ಹಳೆಗೇಟು ಖಾದಿಮುಲ್ ಇಸ್ಲಾಂ ಅಸೋಷಿಯೇಷನ್ ಕಾಂಪ್ಲೆಕ್ಸ್ ನಲ್ಲಿ ಚಿಕನ್ ಎಂಪೈರ್ ಹೊಲ್ಸೇಲ್ ಹಾಗೂ ರಿಟೇಲ್ ದರದ ಕೋಳಿ ಮಾರಾಟ ಕೇಂದ್ರ ಡಿ. 23 ರಂದು ಶುಭಾರಂಭಗೊಂಡಿತು.
ನೂತನ ಸಂಸ್ಥೆಯನ್ನು ಧಾರ್ಮಿಕ ಪಂಡಿತ ಅಬುನುಜ ಉಸ್ತಾದ್ ಪರ್ಪುಂಜ ಇವರು ಉದ್ಘಾಟಿಸಿದರು. ಸಯ್ಯದ್ ಜೈನುಲ್ ಆಬಿಧೀನ್ ತಂಗಳ್ ಜಯನಗರ ರವರು ದುವಾ ನೆರವೇರಿಸಿ ಸಂಸ್ಥೆಗೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಮೊಗರ್ಪಣೆ ಜುಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ ಸೀ ಫುಡ್, ಮದರಸ ಸದರ್ ಮುಅಲ್ಲಿಮ್ ಅಬ್ದುಲ್ ಕರೀಂ ಸಖಾಫಿ, ಹಿರಿಯರಾದ ಅಬ್ದುಲ್ಲಾ ಡಿ, ಮೊಯಿದಿನ್ ಪಂಡಿತ್, ಅಬ್ಬಾಸ್ ಕೋಯಸ್, ಮುನೀರ್ ಹಳೆಗೇಟು, ನವಾಜ್ ಪಂಡಿತ್, ಆಬಿದ್ ಪಂಡಿತ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ನೂತನ ಸಂಸ್ಥೆಯ ಬಗ್ಗೆ ಮಾತನಾಡಿದ ಮಾಲಕ ಇರ್ಷಾದ್ ಪಂಡಿತ್ ‘ನಮ್ಮಲ್ಲಿ ಉತ್ತಮ ಗುಣ ಮಟ್ಟದ ಬೋಯಿಲರ್ ಕೋಳಿಗಳು ಹೋಲ್‌ಸೆಲ್ ಹಾಗೂ ರಿಟೇಲ್ ದರದಲ್ಲಿ ಮಾರಾಟ ಮಾಡಲಾಗುವುದು. ಗ್ರಾಹಕರು ಸಹಕರಿಸುವಂತೆ ಕೇಳಿಕೊಂಡರು.