ಅಪರಾಹ್ನ 2.30ರ ವೇಳೆ ಶೇ. 79 ಮತದಾನ
ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗೆ ನಿರ್ದೇಶಕರುಗಳ ಆಯ್ಕೆಗೆ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆಯುತ್ತಿದ್ದು, ಅಪರಾಹ್ನ 2.30ರ ವೇಳೆಗೆ ಶೇ.79ರಷ್ಟು ಮತದಾನವಾಗಿರುವುದಾಗಿ ತಿಳಿದುಬಂದಿದೆ.
ಕಣದಲ್ಲಿ 27 ಮಂದಿ ಅಭ್ಯರ್ಥಿಗಳಿದ್ದು, ಇಂದು ಸಂಜೆ ಮತದಾನ ಮುಗಿದ ಬಳಿಕ ಫಲಿತಾಂಶ ಘೋಷಣೆಯಾಗಲಿದೆ.