ಬಳ್ಪ: ಎಣ್ಣೆಮಜಲು ಶಾಲಾ ವಾರ್ಷಿಕೋತ್ಸವ

0

ಎಣ್ಣೆಮಜಲು
ದ.ಕ. ಜಿ. ಪಂ. ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ
ಎಣ್ಣೆಮಜಲು ಮತ್ತು ಹಳೆ ವಿದ್ಯಾರ್ಥಿ ಸಂಘ ಎಣ್ಣೆಮಜಲು ಇವುಗಳ ಸಂಯುಕ್ತ ಆಶ್ರಯದಲ್ಲಿ ಕ್ರೀಡೋತ್ಸವ ಮತ್ತು ನಿವೃತ್ತ ಅಂಗನವಾಡಿ ಕಾರ್ಯಕರ್ತೆಗೆ
ಸನ್ಮಾನ ಸಮಾರಂಭ ಡಿ. 14ರಂದು ನಡೆಯಿತು. ಚಂದ್ರಶೇಖರ ಪಂಡಿ
ಧ್ವಜಾರೋಹಣಗೈದರು. ಬಳ್ಪ ಗ್ರಾ.ಪಂ. ಅಧ್ಯಕ್ಷ ಹರ್ಷಿತ್ ಕಾರ್ಜ ಕ್ರೀಡೋತ್ಸವದ ಉದ್ಘಾಟನೆಗೈದು ಸಭಾಧ್ಯಕ್ಷತೆಯನ್ನು ವಹಿಸಿದ್ದರು.

ಸಭಾ ಕಾರ್ಯಕ್ರಮದ ಬಳಿಕ
ಹಳೆ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆಗಳನ್ನು
ನಡೆಸಲಾಯಿತು. ಸಂಜೆ ಸಮಾರೋಪ ಸಮಾರಂಭದಲ್ಲಿ ಶ್ರೀಮತಿ ಹರಿಣಾಕ್ಷಿ ಪದ್ಮನಾಭ ಇವರನ್ನು ಜಿಲ್ಲಾ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕರಾದ ಹೊನ್ನಪ್ಪ ಗೌಡ ಅಡ್ತಲೆಯವರು ಸನ್ಮಾನಿಸಿದರು. ಸಭಾಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ
ಅಧ್ಯಕ್ಷ ಚಂದ್ರನಾಥ ಪಟೋಳಿ ವಹಿಸಿದ್ದರು.

ವೇದಿಕೆಯಲ್ಲಿ ಬಳ್ಪ
ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಶೈಲಜಾ, ಶ್ರೀಮತಿ ನೇತ್ರಾವತಿ, ಶ್ರೀಮತಿ ಶಶಿಕಲಾ, ದಿವಾಕರ ಎಣ್ಣೆಮಜಲು, ಊರಿನ ಗಣ್ಯರಾದ ಪಟೇಲ್ ಪುಟ್ಟಣ್ಣ ಗೌಡ ಎಣ್ಣೆ ಮಜಲು, ಭಾಸ್ಕರಗೌಡ ಪಂಡಿ, ಗೋಪಾಲ ಅಮ್ಮಣ್ಣಾಯ
ಮುಡ್ನೂರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಎಣ್ಣೆಮಜಲು, ಬಾಲ ವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀಮತಿ ಪುಣ್ಯ, ವಿದ್ಯಾರ್ಥಿ ನಾಯಕಿ ನಿರ್ವಿಕ ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಶಾಲಿನಿ ಯಂ ವರದಿ ವಾಚಿಸಿ, ಸ್ವಾಗತಿಸಿದರು. ಸಹಶಿಕ್ಷಕಿ ಸರಿತಾ ಕಾರ್ಯಕ್ರಮ ನಿರೂಪಿಸಿ
ವಂದನಾರ್ಪಣೆಗೈದರು.ನಂತರ ಅಂಗನವಾಡಿ ಪುಟಾಣಿಗಳು, ಶಾಲಾ
ವಿದ್ಯಾರ್ಥಿಗಳು, ಶಾಲಾ ಪೋಷಕರು ಮತ್ತು ಹಳೆವಿದ್ಯಾರ್ಥಿಗಳಿಂದ ಸಾಂಸ್ಕೃತಿಕ
ಕಾರ್ಯಕ್ರಮಗಳು ನಡೆಯಿತು.