ಪ್ರತಿಷ್ಠಿತ ಜೆಸಿಐ ಭಾರತದ ವಲಯ 15 ರ 2025 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ 23.12.24 ರಂದು ಕುಂದಾಪುರದ ತೆಕ್ಕಟ್ಟೆ ಯ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಲಯ 15ರ ಸಮುದಾಯ ಅಭಿವೃದ್ಧಿ ವಿಭಾಗದಲ್ಲಿ ಗೋ ಗ್ರೀನ್ ನ ವಿಭಾಗದ ವಲಯ ಸಂಯೋಜಕರಾಗಿ ಜೆಸಿ ಜೆಎಫ್ಎಂ ಗುರುಪ್ರಸಾದ್ ನಾಯಕ್ ಇವರನ್ನು ವಲಯ 15ರ ವಲಯಾದ್ಯಕ್ಷ ಸೆನೆಟರ್ ಅಭಿಲಾಶ್ ಬಿ.ಎ. ಇವರು ಆಯ್ಕೆ ಮಾಡಿದರು.
ಇವರು ಜೇಸಿಐ ವಲಯದ 42 ವರುಷ ಗಳ ಇತಿಹಾಸ ಇರುವ ಪ್ರತಿಷ್ಠಿತ ಘಟಕ ಜೇಸಿಐ ಸುಳ್ಯ ಪಯಸ್ವಿನಿ ಯ ಸದಸ್ಯರಾಗಿದ್ದು 2024ನೇ ಸಾಲಿನಲ್ಲಿ ಘಟಕ ಅಧ್ಯಕ್ಷರಾಗಿ ಘಟಕವನ್ನು ಮುನ್ನಡೆಸಿ ವಲಯ ಪ್ರಶಸ್ತಿಗೆ ಭಾಜನಾರಾಗಿ ಈ ಬಾರಿ ವಲಯ ಸಂಯೋಜಕರಾಗಿ ಆಯ್ಕೆಯಾಗಿರುತ್ತಾರೆ.