ಕ್ರೈಸ್ತ ಬಾಂಧವರ ಪವಿತ್ರ ಹಬ್ಬ ಕ್ರಿಸ್ಮಸ್‌ನ್ನು ಸೈಂಟ್ ಬ್ರಿಜಿಡ್ಸ್ ಚರ್ಚ್‌ನ ಧರ್ಮಗುರುಗಳಾದ ಫಾ. ವಿಕ್ಟರ್ ಡಿಸೋಜಾ ಹಾಗೂ ಚರ್ಚ್ ಪಾಲನಾ ಸಮಿತಿಯ ಪದಾಧಿಕಾರಿಗಳು ಕೇಕ್ ಕತ್ತರಿಸುವ ಮೂಲಕ ಸುಳ್ಯದ ಸುದ್ದಿ ಬಿಡುಗಡೆ ಕಚೇರಿಯಲ್ಲಿ ಆಚರಿಸಿಕೊಂಡರು. ಫಾ. ವಿಕ್ಟರ್ ಡಿಸೋಜಾ ಮಾತನಾಡಿ, ಕ್ರಿಸ್ಮಸ್ ಹಬ್ಬದ ಮಹತ್ವದ ಬಗ್ಗೆ ವಿವರಿಸಿ, ಸಂದೇಶ ನೀಡಿದರು.
ಪಾಲನಾ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೋ, ಕಾರ್ಯದರ್ಶಿ ಜೂಲಿಯಾನ ಕ್ರಾಸ್ತಾ, ನ.ಪಂ. ಸದಸ್ಯ ಡೇವಿಡ್ ಧೀರಾ ಕ್ರಾಸ್ತಾ ಮಾತನಾಡಿ ಶುಭ ಹಾರೈಸಿದರು. ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ಧರ್ಮಗುರುಗಳಿಗೆ ಶಾಲು ಹಾಕಿ ಗೌರವಿಸಿದರು. ಧರ್ಮಗುರುಗಳು ಸಿಬ್ಬಂದಿಗಳಿಗೆ ಸಿಹಿ ತಿಂಡಿ ವಿತರಿಸಿ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಸುದ್ದಿ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಶ್ರೀಧರ್ ಕಜೆಗದ್ದೆ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.