ಶ್ರೀ ಸಂಗಮ ಕ್ಷೇತ್ರ ಅಯ್ಯಪ್ಪ ಸ್ವಾಮಿ ಆರಾಧನಾ ಮಂದಿರ ಹರಿಹರ ಪಲ್ಲತ್ತಡ್ಕದ 29ನೇ ವರ್ಷದ ಪೂಜೋತ್ಸವ ಮತ್ತು ಗಣಪತಿ ಹೋಮ ಹಾಗು ಸತ್ಯನಾರಾಯಣ ದೇವರ ಪೂಜೆಯು ಡಿ.23ರಂದು ಗೋಪಾಲಕೃಷ್ಣ ಗುರುಸ್ವಾಮಿ ಇವರ ನೇತೃತ್ವದಲ್ಲಿ ಹಾಗು ಪುರೋಹಿತ ನಾಗರಾಜ್ ಭಟ್ ಇವರ ಸಾರಥ್ಯದಲ್ಲಿ ನಡೆಯಿತು.
ಬೆಳಿಗ್ಗೆ ಗಣಪತಿ ಹವನ ನಂತರ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗು ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಸಾಯಂಕಾಲ ವಿವಿದ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆದು ರಾತ್ರಿ ಮಹಾಪೂಜೆ ಪ್ರಸಾದ ವಿತರಣೆ ಹಾಗು ಅನ್ನಸಂತರ್ಪಣೆ ನಡೆಯಿತು
ಈ ಸಂದರ್ಭದಲ್ಲಿ ಅಯ್ಯಪ್ಪ ಮಾಲವೃತದಾರಿಗಳು, ಶ್ರೀ ಸಂಗಮ ಕ್ಷೇತ್ರ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ನ ಅದ್ಯಕ್ಷರು ಮತ್ತು ಪದಾಧಿಕಾರಿಗಳು, ಊರ ಪರವೂರ ಭಕ್ತಾದಿಗಳು ಪಾತ್ರರಾಗಿದ್ದರು.