ಮಾಜಿ ಪ್ರಧಾನಿ ಡಾ. ಮನಮೋಹನ್ ಸಿoಗ್ ನಿಧನ :ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂತಾಪ ಸಭೆ

0


ಮನಮೋಹನ್ ಸಿಂಗ್ ರವರ 9 ಜನಪರ ಕಾರ್ಯಕ್ರಮಗಳು ಇಂದಿಗೂ ಪ್ರಸ್ತುತ :ಎಂವಿಜಿ


ದೇಶ ಕಂಡ ಅಪ್ರತಿಮ ಆರ್ಥಿಕ ಮತ್ತು ಶಿಕ್ಷಣ ತಜ್ಞ ಡಾ. ಮನಮೋಹನ್ ಸಿಂಗ್ ರವರು ದೇಶದ ಆರ್ಥಿಕತೆ ಯನ್ನು ಸದೃಢ ಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು, ಶಿಕ್ಷಣ, ಉದ್ಯೋಗ, ಕೃಷಿಕರ 72 ಸಾವಿರ ಕೋಟಿ ಸಾಲ ಮನ್ನಾ ಸ್ವತoತ್ರ ಭಾರತದ ಇತಿಹಾಸದಲ್ಲಿ ಯೆ ದಾಖಲೆ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನ್ಯಾಯವಾದಿ ಎಂ. ವೆಂಕಪ್ಪ ಗೌಡ ಹೇಳಿದರು.


ನಮ್ಮನ್ನಗಲಿದ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ರವರಿಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಏರ್ಪಡಿಸಲಾದ ಶ್ರದ್ದಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.


ಪುಷ್ಪ ನಮನ ಸಲ್ಲಿಸಿ ಮೌನ ಪ್ರಾರ್ಥನೆ ನಡೆಸಿ ಕೆಪಿಸಿಸಿ ಅಲ್ಪ ಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಡಿಸಿಸಿ ಪ್ರದಾನ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು, ಮಾಧ್ಯಮ ಸಂಯೋಜಕ ನಂದರಾಜ್ ಸಂಕೇಶ್ ಮಾತಾನಾಡಿದರು.


ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಗೋಕುಲದಾಸ್, ಪವಾಜ್ ಕನಕಮಜಲು, ಧನುಷ್ ಕುಕ್ಕೆಟ್ಟಿ, ರಾಧಾ ಕೃಷ್ಣ ಆರಂಬೂರು, ರಾಜು ಪಂಡಿತ್, ಶಹೀದ್ ಪಾರೆ, ತೀರ್ಥರಾಮ ಜಾಲ್ಸೂರು, ಕೇಶವ ಅಲೆಟ್ಟಿ, ಮಹೇಶ್ ಕುರುಂಜಿ ಭಾಗ್, ಗಂಗಾಧರ ಮೇನಾಲ ದಿನೇಶ್ ಗುತ್ತಿಗಾರು, ಮೊದಲಾದವರು ಉಪಸ್ಥಿತರಿದ್ದರು
ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಪಿ. ಎಸ್. ಗಂಗಾಧರ್ ಸ್ವಾಗತಿಸಿ ವಂದಿಸಿದರು.