ಸುಳ್ಯ ನಾಗಪಟ್ಟಣ ದೇವಸ್ಥಾನದಲ್ಲಿ ಅರ್ಚಕರಾಗಿದ್ದ ಕೃಷ್ಣ ಕೆದಿಲಾಯರು ಅಲ್ಪ ಕಾಲದ ಅಸೌಖ್ಯದಿಂದ ಇಂದು (ಡಿ.10) ಮುಂಜಾನೆ ನಿಧನರಾದರು. ಅವರಿಗೆ ಸುಮಾರು 82 ವರ್ಷ ವಯಸ್ಸಾಗಿತ್ತು.








ನಾಗಪಟ್ಟಣ ಸದಾಶಿವ ದೇವಸ್ಥಾನದಲ್ಲಿ ಸುಮಾರು 40 ವರ್ಷಗಳಿಂದ ಅರ್ಚಕರಾಗಿದ್ದರು. ವಯೋಸಹಜ ನಿಶಕ್ತಿಯಿಂದಾಗಿ ಮನೆಯಲ್ಲಿದ್ದರು. ಬಳಿಕ ಅವರ ಮಕ್ಕಳು ನಾಗಪಟ್ಟಣ ದೇವಸ್ಥಾನದಲ್ಲಿ ಪೌರೋಹಿತ್ಯ ಕೆಲಸ ಮಾಡುತಿದ್ದಾರೆ.
ಸುಳ್ಯದ ಚೆನ್ನಕೇಶವ ದೇವಸ್ಥಾನ, ಸುಳ್ಯದ ಕಾಯರ್ತೋಡಿ ದೇವಸ್ಥಾನ, ಶ್ರೀರಾಮ ಭಜನಾ ಮಂದಿರದಲ್ಲಿಯೂ ಕೆಲ ಸಮಯ ಅರ್ಚಕರಾಗಿದ್ದರು.
ಮೃತರು ಪತ್ನಿ ಶ್ರೀದೇವಿ, ಪುತ್ರರಾದ ಶಿವಪ್ರಸಾದ್ ಹಾಗೂ ದಿವಿಜೇಶ್, ಹಾಗೂ ಪುತ್ರಿ ವೀಣಾ, ಕುಟುಂಬಸ್ಥರನ್ನು ಅಗಲಿದ್ದಾರೆ.










