ಬದ್ರಿಯಾ ಜುಮಾ ಮಸೀದಿ ಇಂದ್ರಾಜೆ
ಇದರ ವಾರ್ಷಿಕ ಮಹಾಸಭೆ ಜನವರಿ 3 ರಂದು ಹಿದಾಯತ್ತುಲ್ ಇಸ್ಲಾಂ ಮದರಸ ಹಾಲ್ ನಲ್ಲಿ ಜಮಾಅತ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ಜಮಾಅತ್ ಗೌರವ ಅಧ್ಯಕ್ಷರಾದ ಹಾಜಿ ಪಿ ಇಸಾಕ್ ಸಾಹೇಬ್ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಜಮಾಅತ್ ಪ್ರಧಾನ ಕಾರ್ಯದರ್ಶಿ ಫಾರೂಕ್ ಸಾಹೇಬ್ ಕಳೆದ ಸಾಲಿನ ವರದಿ ಹಾಗೂ ಲೆಕ್ಕಪತ್ರ ವನ್ನು ವಾಚಿಸಿ ಎಲ್ಲರ ಸಮ್ಮತಿಯೊಂದಿಗೆ ವರದಿ ಹಾಗೂ ಲೆಕ್ಕಪತ್ರ ವನ್ನು ಅಂಗೀಕರಿಸಲಾಯಿತು
ನಂತರ ಹಾಲಿ ಸಮಿತಿಯನ್ನು ವಜಾಗೊಳಿಸಿ ನೂತನ ಸಮಿತಿಯನ್ನು ಆಯ್ಕೆಮಾಡಲಾಯಿತು.
ಅಧ್ಯಕ್ಷರಾಗಿ ವೈ.ಕೆ.ಸುಲೈಮಾನ್ ಹಾಜಿ,ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ಹಾಜಿ ಇಂದ್ರಾಜೆ, ಕೋಶಾಧಿಕಾರಿ ಯಾಗಿ ಕೆ.ಪಿ.ಹಮೀದ್, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಮುಸ್ಲಿಯಾರ್, ಕಾರ್ಯದರ್ಶಿಯಾಗಿ ರಶೀದ್ ಎ.ಕೆ
ಸದಸ್ಯರು ಗಳಾಗಿ ಇಸ್ಮಾಯಿಲ್ ಹಾಜಿ, ಇಸ್ಮಾಯಿಲ್ ಎನ್.ಎ,ಸಿದ್ದೀಕ್ ಮುಸ್ಲಿಯಾರ್, ಕೆ.ಯಂ.ಅಬುಬಕ್ಕರ್, ಬಶೀರ್ ಇಂದ್ರಾಜೆ, ರಝ್ಝಾಕ್ ಪಳ್ಳಿಮನೆ ಸಹಿತ 11 ಜನರ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಜಮಾಅತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ಗಫೂರು ಸಹಿತ ಜಮಾಅತಿನ ಎಲ್ಲಾ ಸದಸ್ಯರು ಮಹಾಸಭೆಯಲ್ಲಿ ಭಾಗವಹಿಸಿದರು