ಸುಳ್ಯದ ಅಂಬಟಡ್ಕದಲ್ಲಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿ ಜ.14ರಿಂದ ಆರಂಭ

0

ಶ್ರೀ ಪತಂಜಲ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ ಪುತ್ತೂರು ತಾಲೂಕು ದ.ಕ. ಜಿಲ್ಲೆ ಹಾಗೂ ಶ್ರೀ ವೆಂಕಟರಮಣ ದೇವ ಮಂದಿರ ಅಂಬಟೆಡ್ಕ ಇದರ ಸಹಯೋಗದಲ್ಲಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಬೇತಿ ಜ.14ರಿಂದ ಅಂಬಟಡ್ಕದ ವೆಂಕಟರಮಣ ದೇವ ಮಂದಿರದಲ್ಲಿ ಆರಂಭ ಗೊಳ್ಳಲಿದೆ.

ಜ.14ರಂದು ಬೆಳಗ್ಗೆ 6 ಗಂಟೆಗೆ ಉದ್ಘಾಟನೆ ನಡೆಯುವುದು.‌ಜ.15 ರಿಂದ ಬೆಳಗ್ಗೆ 5 ರಿಂದ 6.30ರ‌ ತನಕ ನಿತ್ಯ ತರಗತಿಗಳು‌ ನಡೆಯುವುದು.

10 ವರ್ಷ ಮೇಲ್ಪಟ್ಟ ಎಲ್ಲ ವಯಸ್ಸಿನ ಪುರುಷ ಹಾಗೂ ಮಹಿಳೆಯರು ಭಾಗವಹಿಸಬಹುದಾಗಿದೆ.

ಯೋಗ ಶಿಕ್ಷಣ ಪಡೆಯುವುದರಿಂದ ಉದ್ವೇಗ, ಒತ್ತಡ, ಖಿನ್ನತೆ ಶಮನಕ್ಕಾಗಿ, ಏಕಾಗ್ರತೆಗಾಗಿ, ನೆನಪಿನ ಶಕ್ತಿಯ ಚುರುಕಿಗಾಗಿ, ಸಂಧಿವಾತ ದೋಷ, ನಿದ್ರೆಯ ಸಮಸ್ಯೆ, ಆಸಿಡಿಟಿ, ಮೂಲವ್ಯಾಧಿ, ರಕ್ತದೊತ್ತಡ, ಗಂಟು ನೋವು, ಮೈಗ್ರೇನ್‌, ತಲೆನೋವು ಇತ್ಯಾದಿ ಸಮಸ್ಯೆಗಳ ಹತೋಟಿ ಮತ್ತು ನಿವಾರಣೆ ಸಿಗುವುದು ಎಂದು ಸಂಘಟಕರು ತಿಳಿಸಿದ್ದಾರೆ.