ಸುನಾದ ಸಂಗೀತ ಕಲಾ ಶಾಲೆ ಸುಳ್ಯ ಶಾಖೆಯ ‘ಸುನಾದ ಸಂಗೀತೋತ್ಸವ -2025’

0

ಸುನಾದ ಸಂಗೀತ ಕಲಾ ಶಾಲೆಯ ಸುಳ್ಯ ಶಾಖೆಯ ವತಿಯಿಂದ ಸುನಾದ ಸಂಗೀತೋತ್ಸವ ಜ.12ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಯಿತು. ದಿನ ಪೂರ್ತಿ ನಡೆಯುವ ಸಂಗೀತ ಸಂಭ್ರಮಕ್ಕೆೆ ಸಂಸ್ಥೆೆಯ ನಿರ್ದೇಶಕರು ಹಾಗೂ ಸಂಗೀತ ಗುರುಗಳಾದ ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಮತ್ತು ಶ್ರೀಮತಿ ವಿಜಯಶ್ರೀ ಭಟ್ ದಂಪತಿಯವರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀಮತಿ ವಾಣಿ ಶ್ಯಾಾಂಪ್ರಸಾದ್, ಸೌಜನ್ಯ ಪ್ರಶಾಂತ್ ಬೆಂಗಳೂರು, ಮಹಾಬಲೇಶ್ವರ ಬಿರ್ಮುಕಜೆ ಮತ್ತು ರವಿರಾಜ್ ಅಡ್ಕಾರ್ ಉಪಸ್ಥಿತರಿದ್ದರು.


ಬಳಿಕ ಗುರುವಂದನೆ ನಡೆದು ನಂತರ ಸುನಾದ ಸಂಗೀತ ಕಲಾ ಶಾಲಾ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಿತು.


ಸಂಜೆ 6ರಿಂದ ಸಂಜೆ ಗಂಟೆ 6ರಿಂದ ವಿದ್ವಾಾನ್ ಟಿ.ವಿ. ರಾಮ್‌ಪ್ರಸಾದ್ ಹಾಗೂ ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ. ವಯಲಿನ್ – ವಿದ್ವಾನ್ ತ್ರಿವೆಂಡ್ರಮ್ ಎನ್. ಸಂಪತ್, ಮೃದಂಗ – ವಿದ್ವಾನ್ ಕಾಂಚನ ಎ. ಈಶ್ವರ ಭಟ್, ಘಟಂ – ವಿದ್ವಾಾನ್ ಉಡುಪಿ ಶ್ರೀಧರ್ ತ್ರಿವೆಂಡ್ರಂ ವಾದಿಕರಾಗಿ ಸಹಕರಿಸಿದರು. ಸಂಸ್ಥೆೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆೆಯಲ್ಲಿ ಭಾಗವಹಿಸಿದ್ದರು.