ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ
ಪಂಜದಲ್ಲಿ ಸಂಭ್ರಮಾಚರಣೆ
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ 12 ನೂತನ ನಿರ್ದೇಶಕರುಗಳ ಆಯ್ಕೆಗೆ ಮತದಾನ ಜ.16 ರಂದು ನಡೆದು 12 ಸ್ಥಾನಗಳಲ್ಲೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಭರ್ಜರಿ ಜಯಗಳಿಸಿದ್ದು ಪಂಜದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಯಿತು.
.
ಗೆಲುವು ಸಾಧಿಸಿದ ಅಭ್ಯರ್ಥಿಗಳಾದ ಚಂದ್ರಶೇಖರ ಶಾಸ್ತ್ರಿ, ಚಿನ್ನಪ್ಪ ಗೌಡ ಚೊಟ್ಟೆಮಜಲು, ಸುಬ್ರಹ್ಮಣ್ಯ ಕುಳ, ಸದಾನಂದ ಕಾರ್ಜ, ವಾಸುದೇವ ಕೆರೆಕ್ಕೋಡಿ , ಅರುಣ್ ರೈ ಗೆಜ್ಜೆ, ಮುದರ ಐವತ್ತೊಕ್ಲು, ವಾಚಣ್ಣ ಕೆರೆಮೂಲೆ ,ಲಿಗೋಧರ ಆಚಾರ್ಯ ಎನ್ ನಾಯರ್ ಕೆರೆ, ತಿಮ್ಮಪ್ಪ ಗೌಡ ಕೂತ್ಕುಂಜ , ಶ್ರೀಮತಿ ವನಿತಾ ಅತ್ಯಡ್ಕ, ಶ್ರೀಮತಿ ಬೇಬಿ ಕಟ್ಟ
ರವರನ್ನು ಹಾರ ಹಾಕಿ, ಶಾಲು ಹೊದಿಸಿ ಸ್ವಾಗತಿಸಿದರು. ಗೆಲುವು ಸಾಧಿಸಿದ ಅಭ್ಯರ್ಥಿಗಳು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಬಾಜಪ ಪಕ್ಷದ ಪ್ರಮುಖರಾದ ಶಿವರಾಮಯ್ಯ ಕರ್ಮಾಜೆ ಶುಭ ಹಾರೈಸಿದರು.ಐವತ್ತೊಕ್ಲು,ಕೂತ್ಕುಂಜ,ಬಳ್ಪ,ಕೇನ್ಯ ಶಕ್ತಿ ಕೇಂದ್ರದ ಅಧ್ಯಕ್ಷರು,ಬೂತ್ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷ ರು, ಸದಸ್ಯರು,ಹಿಂದೂ ಜಾಗರಣ ವೇದಿಕೆ ಪಂಜ ದ ಸದಸ್ಯರು,ಪಕ್ಷದ ಕಾರ್ಯಕರ್ತರು, ಊರವರು ಪಾಲ್ಗೊಂಡಿದ್ದರು.