ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸುಳ್ಯ ವಲಯ ಹಾಗೂ ಪೊಲೀಸ್ ಇಲಾಖೆ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ 2025

0

ಸುಳ್ಯ ಮುಖ್ಯ ರಸ್ತೆಯಲ್ಲಿ ಪೊಲೀಸರು ಹಾಗೂ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ

ಸಂಚಾರ ನಿಯಮ ಪಾಲನೆ ಹಾಗೂ ವಾಹನ ಚಾಲಕರ, ಪ್ರಯಾಣಿಕರ, ಸಾರ್ವಜನಿಕರ ಸುರಕ್ಷತೆ ಅಂಗವಾಗಿ ನಡೆಸಲ್ಪಡುವ ರಸ್ತೆ ಸುರಕ್ಷತಾ ಸಪ್ತಾಹ 2025 ರ ಕಾರ್ಯಕ್ರಮ ಸುಳ್ಯ ಪೊಲೀಸ್ ಇಲಾಖೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸುಳ್ಯ ವಲಯ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಜ 17 ರಂದು ಸುಳ್ಯದಲ್ಲಿ ನಡೆಯಿತು.

ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಸುಳ್ಯ ಜ್ಯೋತಿ ವೃತ್ತದ ಬಳಿ ಸುಳ್ಯ ಠಾಣಾ ಉಪ ನಿರೀಕ್ಷಕರಾದ ಸಂತೋಷ್ ಬಿ ಪಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸುಳ್ಯ ರೋಟರಿ ಶಾಲೆ, ಸಂತ ಜೋಸೆಫ್ ಶಾಲೆ, ಸುಳ್ಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿಧ್ಯಾರ್ಥಿಗಳು ಹಾಗೂ ಶಿಕ್ಷಕರುಗಳು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.
ಬಳಿಕ ವಿಧ್ಯಾರ್ಥಿಗಳು ರಸ್ತೆ ಸುರಕ್ಷತಾ ಬಗ್ಗೆಯ ಜಾಗೃತಿ ಫಲಕವನ್ನು ಪ್ರದರ್ಶಿಸಿ ಘೋಷಣೆ ಮೂಲಕ ಗಾಂಧಿನಗರದವರೆಗೆ ಜಾಥಾ ನಡೆಯಿತು.

ಈ ಸಂಧರ್ಭ ದಲ್ಲಿ ಪಿ ಎಸ್ ಐ ಸರಸ್ವತಿ,ಸ್ಕೌಟ್ಸ್ &ಗೈಡ್ಸ್ ಅಧ್ಯಾಪಕ ಎಂ ಜೆ ಸಶಿಧರ, ಹಾಗೂ ಶಾಲಾ ಶಿಕ್ಷಕರು, ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.