ಕೊಲ್ಲಮೊಗ್ರು ಗ್ರಾಮದ ಕಟ್ಟ ಗೋವಿಂದನಗರ ಎಸ್.ಸಿ, ಎಸ್.ಟಿ ಕಾಲೋನಿಯಲ್ಲಿ ಈಗಾಗಲೇ ಶಿಥಿಲಾವಸ್ಥೆಯಲ್ಲಿದ್ದ ಟಿವಿ ವೀಕ್ಷಣಾ ಕೇಂದ್ರವನ್ನು ಮರು ದುರಸ್ತಿ ಮಾಡಿ ಮತ್ತೆ ಶುಭಾರಂಭಗೊಳಿಸಲಾಯಿತು.
ಸ್ಥಳೀಯರಾದ ಮಾಣಿಕ ಅವರು ಕೇಂದ್ರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು . ಸ್ಥಳೀಯ ಮುಖಂಡ ಕೇಶವ ಭಟ್ ಕಟ್ಟ, ಕಾಲೋನಿಯ ದಲಿತ ಸಂಘಟನೆಯ ಅಧ್ಯಕ್ಷ ಪದ್ಮಯ ಕಟ್ಟ, ಸ್ಥಳೀಯರಾದ ಶ್ರೀನಿವಾಸ, ಕೆ.ಎಸ್. ಗುರುವ, ಬಾಲಕೃಷ್ಣ, ಗೀತಾ, ಅನಿತಾ, ಸಾವಿತ್ರಿ ಮತ್ತಿತರರು ಉಪಸ್ಥಿತರಿದ್ದರು.