ಪೆರಾಜೆ ದೇವಸ್ಥಾನ ರಾಜಗೋಪುರಕ್ಕೆ ಡಾ.ರೇಣುಕಾಪ್ರಸಾದ್ ಕೆ.ವಿ.ಯವರಿಂದ 1 ಲಕ್ಷ ರೂ ದೇಣಿಗೆ

0

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ರಾಜಗೋಪುರ ನಿರ್ಮಾಣ ಕಾರ್ಯಕ್ಕೆ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಯವರು ರೂ.1 ಲಕ್ಷ ದೇಣಿಗೆ ನೀಡಿದ್ದಾರೆ.

ದೇವಸ್ಥಾನದ ವತಿಯಿಂದ ರಾಜಗೋಪುರ ನಿರ್ಮಾಣ ಕುರಿತು ಮನವಿ ಸಲ್ಲಿಕೆಯ ಆಮಂತ್ರಣ ನೀಡಲು ತೆರಳಿದಾಗ ಸಮಿತಿಯವರಿಗೆ ಅವರು ಚೆಕ್ ಹಸ್ತಾಂತರ ಮಾಡಿದರು.

ರಾಜಗೋಪುರಕ್ಕೆ ಡಾ.ಉಜ್ವಲ್ ಯು.ಕೆ.ಯವರು ಕೂಡಾ ದೇಣಿಗೆಯನ್ನು ಇದೇ ಸಂದರ್ಭದಲ್ಲಿ ದೇಣಿಗೆ ಹಸ್ತಾಂತರ ಮಾಡಿದರು.

ಪೆರಾಜೆ ದೇವಸ್ಥಾನದ ಆಡಳಿತ‌ ಮೊಕ್ತೇಸರ ಎನ್.ಎ.ಜಿತೇಂದ್ರ, ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರ್,
ಚಿನ್ನಪ್ಪ ಸಹ ಕಾರ್ಯದರ್ಶಿ, ಸದಸ್ಯ ಮನೋಜ್ ನಿಡ್ಯಮಲೆ,
ಪ್ರಸನ್ನ ಕಲ್ಲಾಜೆ ಉಪಸ್ಥಿತರಿದ್ದರು.