ಜ.19 : ಪೆರುವಾಜೆ ಜಾತ್ರೋತ್ಸವ – ಮಲ್ಲಿಗೆ ಶಯನೋತ್ಸವ

0

ಭಕ್ತರಿಗೆ ಶ್ರೀ ಜಲದುರ್ಗಾ ದೇವಿಗೆ ಮಲ್ಲಿಗೆ ಸಮರ್ಪಣೆಗೆ ಅವಕಾಶ

ದೇವಾಲಯದ ಆವರಣದಲ್ಲೇ ಸಿಗಲಿದೆ ಮಲ್ಲಿಗೆ

ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ ಪ್ರಯುಕ್ತ ಬ್ರಹ್ಮರಥೋತ್ಸವ ಜ.19 ರಂದು ನಡೆಯಲಿದೆ.

ಇದೇ ದಿನ ರಾತ್ರಿ ಮಲ್ಲಿಗೆ ಶಯನೋತ್ಸವ ಎಂಬ ವಿಶಿಷ್ಟ ಸೇವೆ ಸಮರ್ಪಣೆಗೊಳ್ಳಲಿದೆ.‌ ಭಕ್ತರು ಮಲ್ಲಿಗೆ ಸಮರ್ಪಿಸಲು ಅವಕಾಶ ಇದ್ದು ದೇವಾಲಯದ ವಠಾರದಲ್ಲಿ ಮಲ್ಲಿಗೆ ಪಡೆದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ.