ಪೆರುವಾಜೆ ಗ್ರಾಮದ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರೋತ್ಸವವು ಜ.30 ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ ಗಂಟೆ 8.00 ರಿಂದ ದೇವತಾ ಪ್ರಾರ್ಥನೆ,ಮಹಾಗಣಪತಿ ಹೋಮ ಮತ್ತು ಶುದ್ಧಿ ಕಲಶ ನಡೆಯಲಿದೆ.
ಪೂರ್ವಾಹ್ನ ಗಂಟೆ 10.00 ರಿಂದ ವಿಷ್ಣಪ್ರಿಯ ಮಹಿಳಾ ಭಜನಾ ಮಂಡಳಿ ಬೆಳಂದೂರು ವಲಯ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಗಂಟೆ 12.30 ಕ್ಕೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.
ಸಾಯಂಕಾಲ 6.30 ಕ್ಕೆ ರಂಗಪೂಜೆ,ಮಹೋತ್ಸವ,ದರ್ಶನ ಬಲಿ,ಬಟ್ಟಲು ಕಾಣಿಕೆ,ಮಂತ್ರಾಕ್ಷತೆ ನಡೆಯಲಿದೆ.
ಬಳಿಕ ಗುಳಿಗ,ಪಂಜುರ್ಲಿ,ಶಿರಾಡಿ ದೈವಗಳ ನೇಮೋತ್ಸವ ಭಕ್ತಿ,ಸಂಭ್ರಮದಿಂದ ನಡೆಯಲಿದೆ.